Saturday, January 17, 2026
Menu

ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಕೇರಳದ ವಿದ್ಯಾರ್ಥಿಗಳಿಬ್ಬರ ಸಾವು, ಆತ್ಮಹತ್ಯೆ ಶಂಕೆ

ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಹೈಸ್ಪೀಡ್‌ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ, ಇದು ಆತ್ಮಹತ್ಯೆ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಕೇರಳದ ಸ್ಟೆರ್ಲಿನ್ ಎಲಿಜ ಶಾಜಿ (19), ಜಸ್ಟಿನ್ ಜೋಸೆಫ್ (20) ಮೃತಪಟ್ಟಿರುವ ವಿದ್ಯಾರ್ಥಿಗಳು. ಇವರಿಬ್ಬರೂ ಹೆಸರಘಟ್ಟ ರಸ್ತೆಯ ಸಪ್ತಗಿರಿ ಕೇಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಪಿಜಿಗೆ ಟ್ರ್ಯಾಕ್‌ ಮೂಲಕ ಹೋಗಲು ಮುಂದಾಗಿದ್ದಾಗ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ

ಸಿದ್ದರಾಮಯ್ಯರಿಗೆ ಕಪಟ ಬುದ್ಧಿ ಇಲ್ಲ, ಶಿವಕುಮಾರ್‌ಗೆ ಸಿಎಂ ಸ್ಥಾನ ಖಚಿತ: ಹುಲಿಗೆಮ್ಮದೇವಿ ಆರಾಧಕಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಹತ್ತಿರ ಕಪಟ ಬುದ್ಧಿ ಇಲ್ಲ. ಹೀಗಾಗಿ ಅವರು ಖುಷಿಯಿಂದಲೇ ಶಿವಕುಮಾರ್‌ಗೆ ಸ್ಥಾನ ಬಿಟ್ಟುಕೊಡುತ್ತಾರೆ, ಶಿವಕುಮಾರ್‌ ಸಿಎಂ ಆಗುವುದು ಖಚಿತ ಎಂದು ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಭವಿಷ್ಯ ಹೇಳಿದ್ದಾರೆ.

ಕೋಲಾರದಲ್ಲಿ ಆಗಾಗ ತವರುಮನೆಗೆ ಹೋಗುತ್ತಿದ್ದಳೆಂದು ಪತ್ನಿಯ ಕೊಲೆಗೈದ ಪತಿ

ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಆಗಾಗ ತವರು ಮನೆಗೆ ಹೋಗಿ ಬರುತ್ತಿದ್ದ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಗಂಡ ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ. ಅನುಮಾನಗೊಂಡ ಮೃತಳ ಪೋಷಕರು

ಗಾಜಾ ಮೇಲೆ ಮತ್ತೆ ಇಸ್ರೇಲ್‌ ದಾಳಿ: 24 ಪ್ಯಾಲೆಸ್ತೀನಿಯರು ಬಲಿ

ಇಸ್ರೇಲ್‌ ಗಾಜಾದ ಮೇಲೆ ಮತ್ತೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 24 ಪ್ಯಾಲೆಸ್ತೀನಿಯರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಎರಡು ವರ್ಷಗಳ ಯುದ್ಧದ ನಂತರ ಅಕ್ಟೋಬರ್ 10 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ

ಬಿಹಾರದ 7 ಜಿಲ್ಲೆಗಳ ತಾಯಿ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ

ಪಾಟ್ನಾದ ಮಹಾವೀರ ಕ್ಯಾನ್ಸರ್ ಸಂಸ್ಥಾನ, ನವದೆಹಲಿಯ ಏಮ್ಸ್ ಮತ್ತು ಜೀವರಸಾಯನಶಾಸ್ತ್ರ ವಿಭಾಗದ ಸಂಶೋಧಕರ ಒಕ್ಕೂಟ ನಡೆಸಿರುವ ಅಧ್ಯಯನವೊಂದರಲ್ಲಿ ಬಿಹಾರದ ಏಳು ಜಿಲ್ಲೆಗಳ ತಾಯಂದಿರ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಪತ್ತೆಯಾಗಿದೆ. ಬಿಹಾರದಲ್ಲಿ ನಡೆದ ಮಹತ್ವದ ವೈದ್ಯಕೀಯ-ವೈಜ್ಞಾನಿಕ ಅಧ್ಯಯನ ಇದಾಗಿದ್ದು, ಆಘಾತಕಾರಿ ಮಾಹಿತಿಯೊಂದನ್ನು ಹೊರ

ಕಾಲ್‌ಸೆಂಟರ್‌ ಉದ್ಯೋಗಿಗಳ ಅಪಹರಣ: 8 ಆರೋಪಿಗಳು ಸೆರೆ

ಬೆಂಗಳೂರಿನ ಕೋರಮಂಗಲದಲ್ಲಿರುವ ಕಾಲ್‌ಸೆಂಟರ್‌ನಿಂದ ಉದ್ಯೋಗಿಗಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಟು ಆರೋಪಿಗಳನ್ನು 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬನಾಗಿರುವ ಚಲಪತಿ ಕೋಲಾರ ಜಿಲ್ಲೆಯ ಕಾನ್‌ಸ್ಟೇಬಲ್. ಈತನ ತಂಡ ಕೋರಮಂಗಲ ಕಾಲ್‌ಸೆಂಟರ್‌ ಗೆ ಹೋಗಿ ನಾಲ್ವರನ್ನು ಕರೆದು ನಾವು ಪೊಲೀಸರು

“ನಾರಾಯಣಗುರುಗಳ ಬದುಕೇ ಅಪ್ಪಟ ಮನುಷ್ಯರನ್ನು ರೂಪಿಸುವುದಾಗಿತ್ತು”

ಜಾತ್ಯತೀತತೆಯ ಮರ್ಯಾದಾ ಹತ್ಯೆ ನಡೆಯುವಾಗ ನಾರಾಯಣ ಗುರುಗಳ ಆದರ್ಶ ಪ್ರಸ್ತುತ ಆಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್  ಹೇಳಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಮಂದಿಗೆ ನಾರಾಯಣಗುರು ಪ್ರಶಸ್ತಿ

ಕೆಆರ್ ಪೇಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಬಾವಿಯಲ್ಲಿ ಪತ್ತೆ

ಮಂಡ್ಯದ ಕೆಆರ್ ಪೇಟೆ ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಬಾವಿಯೊಂದರಲ್ಲಿ 22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಮೂಲದ ಕರಣ್.ಎಸ್ ಎಂದು ಗುರುತಿಸಲಾಗಿದೆ. ​ಕರಣ್ ಶ್ರವಣಬೆಳಗೊಳದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತದೇಹ ಪತ್ತೆಯಾದ ಬಾವಿಯ ಸಮೀಪದಲ್ಲೇ

ನಕಲಿ ಗುರೂಜಿ ಬಳಿ ಚಿಕಿತ್ಸೆಗೆ ಹೋಗಿ 48 ಲಕ್ಷ ರೂ. ಜೊತೆ ಆರೋಗ್ಯ ಕಳಕೊಂಡ ಬೆಂಗಳೂರಿನ ಟೆಕ್ಕಿ

ನಕಲಿ ಗುರೂಜಿ ಬಳಿ ಬೆಂಗಳೂರಿನ ಟೆಕ್ಕಿಯೊಬ್ಬರು ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋಗಿ 48 ಲಕ್ಷ ರೂಪಾಯಿ ಜೊತೆ ಆರೋಗ್ಯವನ್ನೂ ಕಳೆದುಕೊಂಡಿರುವ ಪ್ರಕರಣ ನಡೆದಿದೆ. ‘ದೇವರಾಜ್ ಬೂಟಿ’ ಎಂಬ ದುಬಾರಿ ಔಷಧಿಯನ್ನು ಖರೀದಿಸಿ ಸೇವಿಸಿದ್ದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಕಿಡ್ನಿ

ರಾಯಭಾಗದಲ್ಲಿ ಯುವತಿ ನಾಪತ್ತೆ: ಪಕ್ಕದ ಮನೆಯ ಮೂರು ಮಕ್ಕಳ ತಂದೆಯ ಕೈವಾಡ ಶಂಕೆ

ಬೆಳಗಾವಿ ರಾಯಭಾಗ ತಾಲೂಕಿನಲ್ಲಿ 19 ವರ್ಷದ ಯುವತಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಯುವತಿ ನಾಪತ್ತೆ ಹಿಂದೆ ಮದುವೆಯಾಗಿ ಮೂವರು ಮಕ್ಕಳಿರುವ ಪಕ್ಕದ ಮನೆಯ ವ್ಯಕ್ತಿಯ ಕೈವಾಡವಿದೆ ಎಂದು ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.