Menu

ಗೋಮಾಂಸ ರಫ್ತಿನಲ್ಲಿ ದೇಶಕ್ಕೆ 2ನೇ ಸ್ಥಾನ ತಂದ ಪಿಎಂ ಮೋದಿ: ವಿಶ್ವ ಗೋರಕ್ಷಾ ಪೀಠದ ದಯಾನಂದ ಸ್ವಾಮೀಜಿ ಕಿಡಿ

ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಗೋಮಾಂಸವನ್ನು ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ  ಕಿಡಿ ಕಾರಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗೋಮಾಂಸ ರಫ್ತು ಮತ್ತು ಗೋಹತ್ಯೆ ನಿಷೇಧಿಸದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದರು.

ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!

ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ

ತಂಗಿಯ ಆರತಕ್ಷತೆ ಸಂಭ್ರಮದಲ್ಲಿದ್ದ ಯುವಕರಿಬ್ಬರು ಬೇಲೂರಿನಲ್ಲಿ ಅಪಘಾತಕ್ಕೆ ಬಲಿ

ಬೇಲೂರು ತಾಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬೇಲೂರು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಚಿಕ್ಕಮಗಳೂರು ಮೇನಹಳ್ಳಿ ಗ್ರಾಮದ ಕಿರಣ್ (32) ಮೃತಪಟ್ಟ ಯುವಕರು. ಗುರುವಾರ (ಇಂದು) ಲೋಕೇಶ್ ತಂಗಿ

ಆಧಾರ್‌ ಇದ್ದರೆ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೇ: ಸುಪ್ರೀಂ ಪ್ರಶ್ನೆ

ಆಧಾರ್‌ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್​

ಸೂಟ್‌ಕೇಸ್‌ನಲ್ಲಿ ಥಾಣೆಯ ಯುವತಿ ಶವ: ಲಿವ್ಇನ್ ಪಾರ್ಟ್‌ನರ್ ಅರೆಸ್ಟ್‌

ಥಾಣೆಯ ದೇಸಾಯಿ ಗ್ರಾಮದಲ್ಲಿ ತೊರೆಯೊಂದರ ಸಮೀಪ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪದಡಿ ಲಿವ್-ಇನ್ ಪಾರ್ಟನರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದಾದ ಮರುದಿನ ಆರೋಪಿಯು ಯುವತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ

ವೈಟ್‌ಹೌಸ್‌ ಬಳಿ ಗುಂಡಿನ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಅಮೆರಿಕದ ಶ್ವೇತಭವನ ಸಮೀಪ ನಡೆದ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಬಳಿಕ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಂಡು 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪ ಆ್ಯಂಬುಲೆನ್ಸ್ ಸಂಚಾರಕ್ಕೆ ದುಸ್ತರವಾದ ರಸ್ತೆ: ಗಾಯಾಳು ಸಾವು

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸಲಾಗದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ವರ್ತೂರಿನ 35 ವರ್ಷದ ಆನಂದ್ ಮೃತಪಟ್ಟ ಗಾಯಾಳು.

ಸಿಎಂ ಬದಲಾವಣೆ ಚರ್ಚೆ ತೀವ್ರ: ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತೀವ್ರ ಕಾವೇರಿದ್ದು, ಬಿರುಸಿನ ಮಾತು, ಚಟುವಟಿಕೆಗಳು ಗರಿಗೆದರಿವೆ, ಈ ಮಧ್ಯೆ ಚುಂಚನಗಿರಿ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸಿರುವುದು ಕುತೂಹಲ ಕೆರಳಿಸಿದೆ. ಬೆಂಗಳೂರಿನಿಂದ ಇಂಡಿಗೊ ವಿಮಾನದ ಮೂಲಕ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸುತ್ತಿದ್ದು,

ನಾವು ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಡಿಕೆ ಶಿವಕುಮಾರ್‌ ಮಾರ್ಮಿಕ ನುಡಿ

“ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ 

ಕೋಲಾರದಲ್ಲಿ ಆರ್‌ಟಿಒದಿಂದ ಖಾಸಗಿ ಬಸ್‌ಗಳ ಸೀಜ್‌, ಕೋಟಿಗೂ ಅಧಿಕ ದಂಡ ವಸೂಲಿ

ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಾರಾಜ್ಯ ಖಾಸಗಿ ಬಸ್‌ಗಳನ್ನು ಕೋಲಾರದಲ್ಲಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿರುವ ಬಸ್‌ಗಳನ್ನು ಸೀಜ್‌ ಮಾಡಿದ್ದು, ಒಂದು ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ