Featured
ನಾಳೆಯಿಂದ ಡಿ. 7ರ ವರೆಗೆ ಕಬ್ಬನ್ ಪಾರ್ಕ್ನಲ್ಲಿ ಫ್ಲವರ್ ಶೋ
ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ನಿಮಿತ್ತ ನಾಳೆಯಿಂದ ಡಿ. 7 ರ ವರೆಗೆ ಕಬ್ಬನ್ ಪಾರ್ಕ್ನಲ್ಲಿ 11 ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. 40 ಲಕ್ಷ ರೂ ವೆಚ್ಚದಲ್ಲಿ ಕಬ್ಬನ್ ಪಾರ್ಕ್ ವತಿಯಿಂದ ಈ ಫ್ಲವರ್ ಶೋ ಆಯೋಜಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ವೈನ್ ತಯಾರಿಸಿ ಪಾರ್ಟಿ, ಮಾರಾಟ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ಮದ್ಯ ತಯಾರಿಸಿ ಬಳಿಕ ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಮದ್ಯವನ್ನು ಮಾರಾಟ ಕೂಡ ಮಾಡುತ್ತಾರೆ ಎಂಬ ವಿಚಾರ ಬಯಲಾಗಿದೆ. ಜೈಲಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿ ದುಡ್ಡು ಪಡೆದು ಕೆಲವು ಕೈದಿಗಳು ಐಷಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬುದನ್ನು
ದಾವಣಗೆರೆಯಲ್ಲಿ ನೀರು ತುಂಬಿದ್ದ ಪಾತ್ರೆಗೆ ಬಿದ್ದು ಮಗು ಸಾವು
ದಾವಣಗೆರೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ. ನಿಬಗೂರು ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್, ರಾಜೇಶ್ವರಿ ದಂಪತಿಯ ಪುತ್ರಿ ವೇದ(2) ಮೃತಪಟ್ಟ ಮಗು. ಮನೆಯಲ್ಲಿಯೇ ಆಟವಾಡುತ್ತ ಸ್ನಾನಗೃಹದಲ್ಲಿನ ನೀರು ತುಂಬಿದ ಪ್ಲಾಸ್ಟಿಕ್
ಆನೇಕಲ್ನಲ್ಲಿ ಗ್ರಾಮಕ್ಕೆ ಕಾಡೆಮ್ಮೆ ಲಗ್ಗೆ
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ದೈತ್ಯಾಕಾರದ ಕಾಡೆಮ್ಮೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಕಾಡಿನಿಂದ ದಾರಿತಪ್ಪಿ ಗ್ರಾಮಕ್ಕೆ ಬಂದ ಕಾಡೆಮ್ಮೆ ಆತಂಕದಿಂದ ಗ್ರಾಮದೆಲ್ಲೆಡೆ ಓಡಾಡಿದೆ. ಕಾಡೆಮ್ಮೆ ಓಡಾಟದ ದೃಶ್ಯ ಗ್ರಾಮಸ್ಥರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಗ್ರಾಮಸ್ಥರು ಆನೇಕಲ್
ಫೈನಾನ್ಸಿಯರ್ ಕಿಡ್ನ್ಯಾಪ್: ಸಿಸಿಬಿ ಪೊಲೀಸರಿಂದ ರೌಡಿಶೀಟರ್ ಬೇಕರಿ ರಘು ಅರೆಸ್ಟ್
ಬೆಂಗಳೂರಿನಲ್ಲಿ ಇತ್ತೀಚೆಗೆ ಫೈನಾನ್ಸಿಯರ್ ಮನೋಜ್ ಎಂಬಾತನ ಕಿಡ್ನ್ಯಾಪ್ ಮಾಡಿದ್ದ ಕೇಸ್ ಸಂಬಂಧ ಸಿಸಬಿ ಪೊಲೀಸರು ರೌಡಿಶೀಟರ್ ಬೇಕರಿ ರಘುವನ್ನು ಬಂಧಿಸಿದ್ದಾರೆ. ಸಂಘಟಿತ ಅಪರಾಧ ತಡೆಯುವ ನಿಟ್ಟಿನಲ್ಲಿ ಕೋಕಾ ಕಾಯಿದೆಯಡಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಒಂದು ವರ್ಷ ಜಾಮೀನು ಸಿಗುವುದು ಅನುಮಾನ.
ಕೋಲಾರದಲ್ಲಿ ಮನೆಗೆ ನುಗ್ಗಿ ವೃದ್ಧನ ಕೊಂದು ಹಣ, ಚಿನ್ನಾಭರಣ ದರೋಡೆ
ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧರ ತಲೆಗೆ ಹೊಡೆದು ಕತ್ತು ಸೀಳಿ ಕೊಲೆ ಮಾಡಿ ಹಣ, ಚಿನ್ನಾಭರಣ ದರೋಡೆಗೈದು ಪರಾರಿಯಾಗಿ ದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮನೆಯಲ್ಲಿ ವೆಂಕಟರಾಮಪ್ಪ
ವಿಧಾನಸಭೆ ಚುನಾವಣೆಯಲ್ಲಿ ಮದ್ದೂರಿನಿಂದ ನಾನು ಇಲ್ಲವೇ ಅಭಿಷೇಕ್ ಸ್ಪರ್ಧೆ ಖಚಿತ : ಸುಮಲತಾ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಅಥವಾ ನನ್ನ ಮಗ ಅಭಿಷೇಕ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಂಸದೆ ಸುಮಲತಾ ಹೇಳಿದ್ದಾರೆ. ನನ್ನ ಸ್ಪರ್ಧೆ ಖಚಿತ, ಯಾವ ಕ್ಷೇತ್ರ ಎಮಬುದು ಬಿಜೆಪಿ ವರಿಷ್ಠರು ತೀರ್ಮಾನ, ಆದರೆ ಮದ್ದೂರು ಕ್ಷೇತ್ರ ನನ್ನ
ಕುಡಿದು ಬಂದಳೆಂದು ಪತ್ನಿಯ ಕೊಲೆಗೈದ ಕುಡುಕ
ಪತ್ನಿ ಕುಡಿದು ಮನೆಗೆ ಬಂದಿದ್ದಾಳೆಂದು ಸಿಟ್ಟಿಗೆದ್ದ ಕುಡುಕ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ರಾಮಗಢ ದಾತಮ್ ಬಾಡಿ ಝರಿಯಾದಲ್ಲಿ ನಡೆದಿದೆ. ಪತ್ನಿ ಶಿಲ್ಪಿ ದೇವಿಯನ್ನು ಕೊಲೆಗೈದ ಪತಿ ಉಪೇಂದ್ರ ಪರ್ಹಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿಲ್ಪಿ ದೇವಿಯ ಮೃತದೇಹವನ್ನು
ರಾಜ್ಯದಲ್ಲಿ ಇನ್ನೂ ಒಂದು ಲಕ್ಷ ಪಂಪ್ ಸೆಟ್ ಶೀಘ್ರವೇ ಸಕ್ರಮ: ಸಚಿವ ಕೆಜೆ ಜಾರ್ಜ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 3.50 ಲಕ್ಷ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಉಳಿದ 1 ಲಕ್ಷದಷ್ಟು ಪಂಪ್ ಸೆಟ್ ಗಳನ್ನು ಶೀಘ್ರದಲ್ಲೇ ಸಕ್ರಮ ಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ವಿಜಯನಗರದ ಜಿಲ್ಲಾಧಿಕಾರಿಗಳ ಕಚೇರಿ
ಕಲಬುರಗಿಯಲ್ಲಿ ಭೀಕರ ಅಪಘಾತ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು
ಕಲಬುರಗಿ: ಹಿಂದೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಅವರ ಜೊತೆ ಅವರ ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ




