ಬೆಂಗಳೂರಿನ ಲಗ್ಗೆರೆ ಬಳಿ ವರಮಹಾಲಕ್ಷ್ಮಿ ಹಬ್ಬದ ಅರಿಶಿಣ ಕುಂಕುಮ ಪಡೆಯಲು ನಾದಿನಿಯ ಮನೆಗೆ ಹೋಗುವಾಗ ಅಪಘಾತವಾಗಿ ನವವಿವಾಹಿತೆ ಮೃತಪಟ್ಟಿದ್ದಾರೆ. ಗೀತಾ (23) ಮೃತಪಟ್ಟ ಮಹಿಳೆ.
ಗೀತಾ ಎರಡೂವರೆ ತಿಂಗಳ ಹಿಂದೆ ಸುನೀಲ್ ಎಂಬವರನ್ನು ವಿವಾಹವಾಗಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಅರಶಿಣ ಕುಂಕುಮ ಪಡೆಯಲೆಂದು ನಂದಿನಿ ಲೇಔಟ್‌ನಲ್ಲಿರುವ ನಾದಿನಿ ಮನೆಗೆ ದಂಪತಿ ಹೊರಟಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗೀತಾ ಸ್ಥಳದಲ್ಲೇ ಅಸು ನೀಗಿದ್ದರೆ, ಸುನೀಲ್‌ಗೆ ಗಾಯಗೊಂಡಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.