ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೆಲವೇ ದಿನಗಳಷ್ಟೇ ಬಾಕಿಯಿವೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಕಠಿಣ ನಿಯಮಗಳನ್ನು ಒಳಗೊಂಡ ಗೈಡ್‌ಲೈನ್ಸ್ ಅನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಯುವ ಸಮೂಹ ಸಿದ್ಧತೆ ನಡೆಸಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿ ಸುರಕ್ಷತೆಯ ಉದ್ದೇಶದಿಂದ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದ್ದಾರೆ.
ಗೈಡ್‌ಲೈನ್ಸ್‌ನಲ್ಲಿ ಏನೇನಿದೆ
*ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಲು ಫೈರ್ ಡಿಪಾರ್ಟ್‌ಮೆಂಟ್ ಪರ್ಮಿಷನ್ ಕಡ್ಡಾಯ. ಫೈರ್ ಅಂಡ್ ಸೇಫ್ಟಿ ಡಿಪಾರ್ಟ್‌ಮೆಂಟ್ ಪರ್ಮಿಷನ್ ಇಲ್ಲದ ಬಾರ್, ಪಬ್ ಬಂದ್.
*ಪರ್ಮಿಷನ್ ಇಲ್ಲದೆ ನಡೆಸಿದರೆ ಕಾನೂನು ಕ್ರಮ , ಪಾರ್ಟಿ ವೇಳೆ ಹೆಚ್ಚು ಗ್ರಾಹಕರು ಸೇರಿ ಅನಾಹುತ ನಡೆದರೆ ಮಾಲೀಕರೇ ಹೊಣೆ. ಪಬ್, ಬಾರ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಗ್ರಾಹಕರನ್ನು ಸೇರಿಸುವಂತಿಲ್ಲ.
*ನಿಗದಿತ ಸಮಯ ಮೀರಿ ಸೇವೆ ನೀಡುವಂತಿಲ್ಲ. ಪ್ರತಿ ಬಾರ್ ಮತ್ತು ಪಬ್‌ನ ಸೆಲೆಬ್ರೆಷನ್ ಜಾಗದಲ್ಲಿ ಸಿಸಿಟಿವಿ ಕಡ್ಡಾಯ. ಮಹಿಳೆಯ ಸುರಕ್ಷತೆ ಕುರಿತು ಎಚ್ಚರಿಕೆ ವಹಿಸಬೇಕು.
ಗೋವಾದಲ್ಲಿ ಇತ್ತೀಚೆಗೆ ನಡೆದ ನೈಟ್ ಕ್ಲಬ್ ಅಗ್ನಿ ದುರಂತಕ್ಕೆ ೨೫ ಮಂದಿ ಬಲಿಯಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಪೊಲೀಸರು ಈ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದಾರೆ.


