ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕೆಂದು ಬಿಎಂಟಿಸಿ, ಇಂದು (ಡಿಸೆಂಬರ್ 31) ತಡರಾತ್ರಿಯವರೆಗೂ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್ ಸೇವೆಗಳನ್ನು ನೀಡಲಿದೆ. ಇಂದು ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆಯವರೆಗೆ ವಿಶೇಷ ಬಸ್‌ಗಳು ಸಂಚರಿಸಲಿದ್ದು, ಪ್ರಯಾಣಿಕರ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸ ಲಾಗುವುದೆಂದು ಬಿಎಂಟಿಸಿ ತಿಳಿಸಿದೆ.
ವಿಶೇಷ ಬಸ್‌ಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರಸ್ತೆಯಿಂದ ಹೊರಟು ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ, ಯಲಹಂಕ (ಉಪನಗರ 5ನೇ ಹಂತ ಸೇರಿ), ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವೆಡೆ ಬಸ್ ಸಂಚಾರ ಇರಲಿದೆ. ಈ ಕಾರಿಡಾರ್‌ಗಳಿಗೆ ಜಿ-ಸರಣಿ ಹಾಗೂ ನಿಯಮಿತ ಮಾರ್ಗದ ಬಸ್‌ಗಳನ್ನು ಮೀಸಲಿಡಲಾಗಿದೆ.
ಮಾರ್ಗ ಮತ್ತು ಬಸ್ ಸಂಖ್ಯೆಗಳ ವಿವರ
ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ – ಜಿ-3, ಜಿಗಣಿ – ಜಿ-4, ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ: ಸರ್ಜಾಪುರ – ಜಿ-2, ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್ – ಜಿ-6, ಜನಪ್ರಿಯ ಟೌನ್‌ಶಿಪ್ – ಜಿ-7, ನೆಲಮಂಗಲ – ಜಿ-8. ಯಲಹಂಕ ಉಪನಗರ 5ನೇ ಹಂತ – ಜಿ-9, ಯಲಹಂಕ – ಜಿ-10, ಬಾಗಲೂರು – ಜಿ-11, ಹೊಸಕೋಟೆ – 317-ಜಿ, ಚನ್ನಸಂದ್ರ / ಕಾಡುಗೋಡಿ – ಎಸ್‌ಬಿಎಸ್-13ಕೆ, ಬನಶಂಕರಿ – 13 ಗೆ ಬಸ್‌ಗಳು ಸಂಚರಿಸಲಿವೆ.


