Menu

ಸ್ಪಾರ್ ಎಕ್ಸ್’ ಮೂಲಕ ಜಪಾನಿನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ಕಲಿಕಾ ಅನುಭವ

ಮಕ್ಕಳಲ್ಲಿ ಜಾಗತಿಕ ಮಟ್ಟದ ಉದ್ಯಮದ ಮನೋಭಾವ ಮೂಡಿಸಲು ಲರ್ನ್ ಎನ್ ಇನ್ಸ್ಪೈರ್ (LIN) ಹಾಗೂ ನಿಶ್ಚಲ್ಸ್ ಸ್ಮಾರ್ಟ್ ಲರ್ನಿಂಗ್ ಸೊಲ್ಯೂಷನ್ಸ್ ಸಹಯೋಗದಲ್ಲಿ ‘ಸ್ಪಾರ್ ಎಕ್ಸ್’ ಯೋಜನೆ ಮೂಲಕ ಬೆಂಗಳೂರಿನ 6 ಶಾಲೆಗಳು ಸೇರಿದಂತೆ ದೇಶದ ಒಟ್ಟು 9 ಪ್ರತಿಷ್ಠಿತ ಶಾಲೆಗಳ 32 ವಿದ್ಯಾರ್ಥಿಗಳು ಜಪಾನಿಗೆ ಕಲಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಪೂರ್ಣ ಪ್ರಮಾಣದ ಪ್ರಾಯೋಜಿತ ಯೋಜನೆ ಇದಾಗಿದ್ದು, ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ, ಅಪೋಲೊ ನ್ಯಾಷನಲ್ ಪಬ್ಲಿಕ್ ಶಾಲೆ, ಅಂಬರ್ ವ್ಯಾಲಿ ರೆಸಿಡೆಂಶಿಯಲ್ ಶಾಲೆ, ಶಾರದಾ ವಿದ್ಯಾನಿಕೇತನ್, ಡಿಪಿಎಸ್, ಸರ್ವಪಲ್ಲಿ ವಿದ್ಯಾ ನಿಲಯಂ ಹೈ ಸ್ಕೂಲ್ ನ 21 ವಿದ್ಯಾರ್ಥಿಗಳು ಈ ಪ್ರವಾಸದಲ್ಲಿ ಉದ್ಯಮಶೀಲತೆಯ ಮೊದಲ ಹಂತದ ಕಲಿಕೆಗೆ ಆಯ್ಕೆಯಾಗಿದ್ದಾರೆ.

ಸ್ಪಾರ್ ಎಕ್ಸ್ ಯೋಜನೆ ಲರ್ನ್ ಎನ್ ಇನ್ಸ್ಪೈರ್ ನ ಮಹತ್ವದ ಯೋಜನೆಯಾಗಿದೆ. ಮಕ್ಕಳ ಮನಸ್ಸಿನಲ್ಲಿ ಉದ್ಯಮಶೀಲತೆ, ತೀಕ್ಷ್ಣ ಆಲೋಚನೆ, ಆರ್ಥಿಕ ಸಾಕ್ಷರತೆ ಹಾಗೂ ಆವಿಷ್ಕಾರ ಮನಸ್ಥಿತಿ ಮೂಡಿಸುವುದು ಇದರ ಉದ್ದೇಶ. ಐದು ದಿನಗಳ ಈ ಕಲಿಕಾ ಪ್ರವಾಸವು ಸಾಂಸ್ಕೃತಿಕ ಕಲಿಕೆ, ಜಪಾನಿನ ನವೊದ್ಯಮಗಳ ಜತೆ ಚರ್ಚೆ, ಕ್ಯೋಟೋ ಹಾಗೂ ಒಸಾಕಾದಲ್ಲಿರುವ ಪಾರಂಪರಿಕ ಸ್ಥಳಗಳಿಗೆ ಭೇಟಿಯನ್ನು ಒಳಗೊಂಡಿದೆ.

ಈ ಕಲಿಕಾ ಪ್ರವಾಸದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಇದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಚಾರ. ಈ 21 ವಿದ್ಯಾರ್ಥಿಗಳು ಕೇವಲ ನಮ್ಮ ರಾಜ್ಯವನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಹಾಗೂ ಕುತೂಹಲದಿಂದ ಈ ಪ್ರವಾಸವನ್ನು ಅನುಭವಿಸಲಿ ಎಂದು ಶುಭ ಕೋರುತ್ತೇನೆ” ಎಂದು ತಿಳಿಸಿದರು.

ಉದ್ಯಮಿ ಐಶ್ವರ್ಯ ಡಿಕೆಎಸ್ ಹೆಗಡೆ ಅವರು ಮಾತನಾಡಿ, “ಶಿಕ್ಷಣವು ವಿದ್ಯಾರ್ಥಿಗಳನ್ನು ತರಗತಿಯಾಚೆಗೆ ಪ್ರಪಂಚದಲ್ಲಿ ಎಲ್ ಐ ಎನ್ ಮುಖ್ಯಸ್ಥರು ಹಾಗೂ ಸಂಸ್ಥಾಪಕರಾದ ಕಲ್ಯಾಣ್ ಹಟ್ಟಿ ಅವರು, “ವಿದ್ಯಾರ್ಥಿಗಳು ಪಠ್ಯಕ್ರಮದ ಹೊರತಾಗಿ ಆಲೋಚಿಸಲು, ಭವಿಷ್ಯದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಪ್ರೋತ್ಸಾಹ ನೀಡುವ ಮೂಲಕ ಭಾರತಕ್ಕೆ ಮತ್ತೆ ಚಿನ್ನದ ಹಕ್ಕಿ ಎಂಬ ಹಿರಿಮೆ ಗಳಿಸುವ ಕಲ್ಪನೆ ನಮ್ಮದಾಗಿದೆ. ಈ ಕಾರ್ಯಕ್ರಮದ ಮೂಲಕ ನಾವು ವಿಕಸಿತ ಭಾರತಕ್ಕೆ ಹೂಡಿಕೆ ಮಾಡುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟರು.

ನಿಶ್ಚಲ್ಸ್ ಸ್ಮಾರ್ಟ್ ಲರ್ನಿಂಗ್ ಸೊಲ್ಯೂಷನ್ಸ್ ನ ಸಂಸ್ಥಾಪಕ ನಿರ್ದೇಶಕರು, “ನಮ್ಮ ಈ ಉದ್ಯಮಶೀಲತೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ವೇದಿಕೆಯಲ್ಲಿ ಅವಕಾಶ ಕಲ್ಪಿಸುತ್ತಿದ್ದೇವೆ. ನೈಜ್ಯ ಜಗತ್ತಿನ ಆವಿಷ್ಕಾರ ಹಾಗೂ ತರಗತಿಯಲ್ಲಿನ ಕಲಿಕೆಯಾಚೆಗೆ ಬೆಲೆ ಕಟ್ಟಲಾಗದ ಅನುಭವ ನೀಡುತ್ತಿದ್ದೇವೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *