ದೇಶದಲ್ಲಿ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೊಸ ಟೋಲ್ ತೆರಿಗೆ ನೀತಿಯನ್ವಯ , ಪ್ರಯಾಣಿಕರು ಪ್ರಯಾಣಿಸಿದ ನಿಖರವಾದ ಕಿಲೋಮೀಟರ್ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಪಾವತಿಸಬಹುದಾಗಿದೆ. ಟೋಲ್ ಸಂಗ್ರಹ ಹೆಚ್ಚು ಪಾರದರ್ಶಕವಾಗಿ ಇರಲು ಬದಲಾವಣೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.
ಪ್ರಯಾಣಿಕರು ಹೆದ್ದಾರಿಯಲ್ಲಿ ತಾವು ಪ್ರಯಾಣಿಸಿದ ನಿಖರ ಕಿಲೋಮೀಟರ್‌ಗೆ ಅನುಗುಣವಾಗಿ ಟೋಲ್ ಶುಲ್ಕವನ್ನು ಪಾವತಿಸಬಹುದು. ಇದು ಸ್ಥಿರ ಟೋಲ್ ಶುಲ್ಕದ ಚಾಲ್ತಿಯಲ್ಲಿರುವ ವಿಧಾನವನ್ನು ಬದಲಾಯಿಸುತ್ತದೆ. ಸ್ಥಿರ ಟೋಲ್‌ನಲ್ಲಿ ದೂರವನ್ನು ಲೆಕ್ಕಿಸದೆ ಒಂದೇ ಶುಲ್ಕವನ್ನು ವಿಧಿಸಲಾಗುತ್ತದೆ.
ಹೊಸ ಟೋಲ್ ತೆರಿಗೆ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ತಂತ್ರಜ್ಞಾನವನ್ನು ಬಳಸಲಾಗುವುದು. ವಾಹನಗಳ ಚಲನೆಯನ್ನು ಟ್ರ‍್ಯಾಕ್ ಮಾಡಲು ಜಿಯೋ-ಫೆನ್ಸಿಂಗ್ ಮತ್ತು ಉಪಗ್ರಹ ಆಧಾರಿತ ಟ್ರ‍್ಯಾಕಿಂಗ್ ವ್ಯವಸ್ಥೆಗಳನ್ನು ಬಳಸಲಾಗುವುದು. ಈ ವ್ಯವಸ್ಥೆ ಟೋಲ್ ಬೂತ್‌ಗಳ ಅಗತ್ಯವನ್ನು ಕಡಿಮೆ ಮಾಡುವ ಜೊತೆಗೆ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಯ್ದ ಹೆದ್ದಾರಿಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾದರೆ ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೆ ವಿಸ್ತರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.