Menu

ಪಾಲಿಕೆಯ ಇ ಖಾತಾ ವ್ಯವಸ್ಥೆಗೆ ಕೇಂದ್ರದಿಂದ “ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ”

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಇ-ಖಾತಾ ವ್ಯವಸ್ಥೆಗೆ ಭಾರತ ಸರ್ಕಾರದಿಂದ 2024-25 ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ” ಸಂದಿದೆ.

ಮನೆ ಮನೆಗೆ ಇ-ಖಾತಾ ಅಭಿಯಾನದ ಮೂಲಕ ಜನರ ಮನೆ ಬಾಗಿಲಿಗೆ ಅವರ ಆಸ್ತಿ ಖಾತಾ ದಾಖಲೆಗಳನ್ನು ತಲುಪಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಬರೆದಿದೆ. ಆ ಮೂಲಕ ತಮ್ಮ ಆಸ್ತಿ ದಾಖಲೆ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಬೆಂಗಳೂರು ನಗರದ ನಾಗರಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇ-ಖಾತಾ ಅಭಿಯಾನ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಸಚಿವರಾದ ಕೃಷ್ಣ ಭೈರೇಗೌಡ ಅವರ ಸ್ವಕ್ಷೇತ್ರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಅವರ ಆಸ್ತಿ ಇ-ಖಾತಾ ದಾಖಲೆಗಳನ್ನು ವಿತರಣೆ ಮಾಡಲಾಯಿತು.

ದಿನಾಂಕ 03.10.2024 ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಈಗಿನ ಗ್ರೇಟರ್ ಬೆಂಗಳೂರು) ಸಾರ್ವಜನಿಕರಿಗೆ ಇ-ಖಾತಾ ನೀಡುವ ಬೃಹತ್ ಕಾರ್ಯ ಪ್ರಾರಂಭವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ 20,95,333 ಸ್ವತ್ತುಗಳ ಪೈಕಿ ದಿನಾಂಕ 27.06.2025 ವರೆಗೆ ಒಟ್ಟು 5,34,674 ಸ್ವತ್ತುಗಳಿಗೆ (25.5%) ಖಾತಾದಾರರು ಅಂತಿಮ ಇ-ಖಾತಾ ಪಡೆದಿರುತ್ತಾರೆ.

ಯಲಹಂಕ ವಲಯದಲ್ಲಿ ಒಟ್ಟು 2,28,146 ಸ್ವತ್ತುಗಳ ಪೈಕಿ 71,055 ಸ್ವತ್ತುಗಳಿಗೆ (30%) ಅಂತಿಮ ಇ-ಖಾತಾವನ್ನು ನೀಡಲಾಗಿದೆ. ಬ್ಯಾಟರಾಯನಪುರ ವಿಭಾಗದಲ್ಲಿನ ಒಟ್ಟು 1,81,135 ಸ್ವತ್ತುಗಳ ಪೈಕಿ 51,289 (28.31%) ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ.

ಇದೇ ವೇಳೆ ಕೋಡಿಗೆಹಳ್ಳಿಯ ಸಹಕಾರನಗರ ಮೈದಾನಲ್ಲಿ ಭಾನುವಾರ ಇ-ಖಾತಾ ಮೇಳ ನಡೆದಿದ್ದು, ಆಸ್ತಿ ಮಾಲೀಕರು ತಮ್ಮ ಆಸ್ತಿಯ ಅಗತ್ಯ ದಾಖಲೆ ಗಳನ್ನು ಒದಗಿಸಿ ಸ್ಥಳದಲ್ಲೇ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಮೇಳದಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. 1679 ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಸಲಾಯಿತು. ಈ ಪೈಕಿ 677 ಅಂತಿಮ ಇ-ಖಾತಾಗಳನ್ನು ಸ್ಥಳದಲ್ಲೇ ವಿತರಿಸಲಾಯಿತು.

Related Posts

Leave a Reply

Your email address will not be published. Required fields are marked *