Menu

ಹಳಿ ತಪ್ಪಿದ ನಮ್ಮ ಮೆಟ್ರೊ ಚಾಲಕ ರಹಿತ ರೈಲು

ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಮ್ಮ ಮೆಟ್ರೋದ ಅತ್ಯಾಧುನಿಕ ತಂತ್ರಜ್ಞಾನದ ಯೆಲ್ಲೋ ಲೈನ್ ನಲ್ಲಿ ಸಂಚರಿಸಬೇಕಾದ ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರದ ವೇಳೆ ಹಳಿ ತಪ್ಪಿದೆ.

ಹೆಬ್ಬಗೋಡಿ ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಚೀನಾದಿಂದ ತರಿಸಲಾದ 3ನೇ ಚಾಲಕ ರಹಿತ ರೈಲು ಇದಾಗಿದೆ. ಮೆಟ್ರೋ ಅಧಿಕಾರಿಗಳಲ್ಲಿ ಈ ಘಟನೆ ತೀವ್ರ ಕಳವಳ ಉಂಟು ಮಾಡಿದೆ. ಡ್ರೈವರ್‌ಲೆಸ್ ರೈಲುಗಳ ಸುರಕ್ಷತೆಯ ಬಗ್ಗೆ ರೈಲ್ವೆ ಬೋರ್ಡ್ ಅಧಿಕಾರಿಗಳು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ಈ ಘಟನೆಯ ತನಿಖೆಗಾಗಿ ಆರು ಜನರ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ತಾಂತ್ರಿಕ ದೋಷ ಅಥವಾ ಹಳಿಗಳಲ್ಲಿನ ಸಮಸ್ಯೆ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಿ ಸಮಿತಿ ವರದಿ ನೀಡಲಿದೆ.

ಸಾರ್ವಜನಿಕರು ನಿತ್ಯ ಅವಲಂಬಿಸಿರುವ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ತಾಂತ್ರಿಕ ಲೋಪಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಚಾಲಕ ರಹಿತ ಮೆಟ್ರೋ ರೈಲಿನ ಸುರಕ್ಷತೆಯ ಬಗ್ಗೆ ಸಮಗ್ರ ತನಿಖೆಯ ಬಳಿಕವೇ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

Related Posts

Leave a Reply

Your email address will not be published. Required fields are marked *