Menu

ಚಿಕ್ಕಮಗಳೂರಿನಲ್ಲಿ ನಾಗಾಲ್ಯಾಂಡ್‌ ಯುವತಿ ಸುಸೈಡ್‌

ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಾಗಾಲ್ಯಾಂಡ್‌ನ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಲಿನ್ಸುಲಾ (22) ಎಂದು ಗುರುತಿಸಲಾಗಿದೆ. ಯುವತಿ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ದಿನದ ಹಿಂದೆ ಕಿವಿಶೆ ಕಿನಿಮಿ ಎಂಬವರ ಜೊತೆ ಅರ್ಧ ಗಂಟೆ ಮಾತನಾಡಿದ್ದಳು ಎಂದು ತಿಳಿದು ಬಂದಿದೆ.

ಯುವತಿ ಸಾವಿಗೂ ಮುನ್ನ ರಾಜೇಶ್ ಹಾಗೂ ತೇಜಸ್ ಎಂಬವರ ಹೆಸರನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಲಿನ್ಸುಲಾಳಿಗೆ ರಾಜೇಶ್ ಹಾಗೂ ತೇಜಸ್ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಲಶಿಲಾ ಇಂಚುಗರ್ ಎಂಬವರು ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ನಟಿ ಕಾಲಿಯಾ ಸಾವು
ಜೈಪುರದಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಟಿ ಮತ್ತು ರೂಪದರ್ಶಿ ಹರ್ಷಿಲ್ ಕಾಲಿಯಾ ಮೃತಪಟ್ಟಿದ್ದಾರೆ. ನಗರದ ಶಿಪ್ರಾ ಪಾತ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಕಾಲಿಯಾ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ವಾಹನವು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳೀಯ ನಿವಾಸಿಗಳು ಕಾಲಿಯಾರನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕಾಲಿಯಾ ‘ಕ್ರೈಮ್ ನೆಕ್ಸ್ಟ್ ಡೋರ್’ ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದರು. ಸುದ್ದಿ ವಾಹಿನಿಯ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದರು. ರಾಜಸ್ಥಾನಿ ಹಾಡುಗಳಲ್ಲಿ ಪ್ರಮುಖ ಮಹಿಳಾ ಪಾತ್ರವನ್ನು ನಿರ್ವಹಿಸಿದ್ದರು. ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.

Related Posts

Leave a Reply

Your email address will not be published. Required fields are marked *