ನ್ಯೂಯಾರ್ಕ್: ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಕೊಂದ ನಂತರ ಮೈಸೂರಿನ ಉದ್ಯಮಿ ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ರೊಬೊಟೆಕ್ ಕಂಪನಿಯಾದ ಹೋಲೋವರ್ಲ್ಡ್ ಸಿಇಒ 57 ವರ್ಷದ ಹರ್ಷವರ್ಧನ ಕಿಕ್ಕೇರಿ, 44 ವರ್ಷದ ಪತ್ನಿ ಹಾಗೂ ಕಂಪನಿ ಸಹ ಸಂಸ್ಥಾಪಕಿ ಶ್ವೇತಾ ಪನ್ಯಾಮ್ ಮತ್ತು 14 ವರ್ಷದ ಪುತ್ರ ಶವ ಕಿಂಗ್ ಕೌಂಟಿ ಶೆರಿಫ್ ನಗರದ ಮನೆಯಲ್ಲಿ ಪತ್ತೆಯಾಗಿದೆ.
ಕಳೆದ ಗುರುವಾರ ಮೂವರ ಶವ ಪತ್ತೆಯಾಗಿದ್ದು, ಮನೆಯ ಹೊರಗೆ ಆಟವಾಡುತ್ತಿದ್ದ 7 ವರ್ಷದ ಘಟನೆಯಿಂದ ಪಾರಾಗಿದ್ದಾನೆ.
ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಶವಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.