Menu

ಹತ್ತು ವರ್ಷದ ಬಳಿಕ ಮಾನಸಿಕ ಅಸ್ವಸ್ಥೆಯನ್ನು ಬಿಹಾರದ ತವರು ತಲುಪಿಸಿದ ಮೈಸೂರಿನ ಮಾನಸಧಾಮ

ಮೈಸೂರಿನ ಗ್ರೀನ್ ಡಾಟ್ ಟ್ರಸ್ಟ್ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರವಾದ ಮಾನಸಧಾಮ ಹತ್ತು ವರ್ಷದ ಬಳಿಕ ಮಾನಸಿಕ ಅಸ್ವಸ್ಥೆಯೊಬ್ಬರನ್ನು ಅವರ   ಮೂಲ ನೆಲೆಗೆ ಸೇರಿಸುವಲ್ಲಿ  ಯಶಸ್ವಿಯಾಗಿದೆ.

ಮಾನಸಧಾಮದಲ್ಲಿ ಆಶ್ರಯ ಪಡೆದಿದ್ದ ಬಿಹಾರ ರಾಜ್ಯದ ದರ್ಬಾಂಗ್‌ ಜಿಲ್ಲೆಯ ಲಕ್ಷ್ಮಿ ಸಾಗರ್‌  ತಾಲೂಕಿನ  ಕಪ್‌ ಚಾಯ್‌  ಗ್ರಾಮದ ಅನಿತಾ ಚಿತ್ತಚಂಚಲತೆ ಈಗ ತಮ್ಮೂರು ಸೇರಿದ್ದಾರೆ.

ಮಾನಸಿಕ ಖಾಯಿಲೆಗೆ ಸೂಕ್ತ ಚಿಕಿತ್ಸೆ ಸಿಗದೆ ಮನೆಯಿಂದ ತಪ್ಪಿಸಿಕೊಂಡು ಹಲವು ದಿನ ಬೀದಿಯಲ್ಲಿ ಸುತ್ತಾಡಿ  ತಿರುವನಂತಪುರದಲ್ಲಿರುವ ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ  ಸ್ಥಳೀಯ ಪೋಲೀಸರ ನೆರವಿನಿಂದ ೨೦೧೪ರ ಡಿ.24ರಲ್ಲಿ ದಾಖಲಾಗಿದ್ದರು.  ಅಲ್ಲಿ  ಮಾನಸಿಕ ಖಾಯಿಲೆಗೆ ಸೂಕ್ತ ಚಿಕಿತ್ಸೆ ದೊರೆತ ನಂತರ ಅನಿತಾ ಮಾನಸಿಕವಾಗಿ ಗುಣವಾಗುತ್ತಿರುತ್ತಾಳೆ.

ಚೆನ್ನೈ ನಗರದಲ್ಲಿರುವ   ‘ದಿ ಬ್ಯಾನಿಯನ್’ ಸಂಸ್ಥೆಯು ಹಲವಾರು ವರ್ಷಗಳಿಂದ ಬೀದಿ ಬದಿಯಲ್ಲಿರುವ ನಿರಾಶ್ರಿತ ಮಾನಸಿಕ ಅಸ್ವಸ್ಥ ಮಹಿಳೆಯರಿಗಾಗಿ ವಸತಿ ಕೇಂದ್ರವನ್ನು ನಡೆಸುತ್ತಿದ್ದು, ಸುಧಾರಿತ ನಿರಾಶ್ರಿತ ಮಾನಸಿಕ ಅಸ್ವಸ್ಥರಿಗಾಗಿ ‘ಮರಳಿ ಮನೆಗೆ’ ಎಂಬ ಯೋಜನೆಯನ್ನು ದೇಶದ ಹಲವಾರು ರಾಜ್ಯಗಳಲ್ಲಿ ನಡೆಸುತ್ತಿದೆ.   ಈ ಯೋಜನೆಯು ಮಲಪ್ಪುರಂ ಜಿಲ್ಲೆ ಹಾಗೂ ಪುಳಕ್ಕಲ್ ಎಂಬ ಗ್ರಾಮದಲ್ಲಿರುವ ಮರಳಿ ಮನೆಗೆ ಅನಿತಾಳನ್ನು ೨೦೧೯ರ ಜು.17ರಂದು  ಸ್ಥಳಾಂತರಿಸಲಾಯಿತು.

ಇಲ್ಲಿನ ಭಾಷೆ ತಿಳಿಯದ, ವಾತಾವರಣ ಗೊತ್ತಿರದ, ಊಟ, ತಿಂಡಿ ಅಭ್ಯಾಸವಿರದ ಅನಿತಾ  8 ವರ್ಷ ಕೇರಳ ರಾಜ್ಯದಲ್ಲಿ ಕಳೆದಿದ್ದಾರೆ. ನಂತರ ಅನಿತಾಳನ್ನು  ಡಾ.ಸಿ.ಕೆ.ಕಾಂತರಾಜು ಅವರ ಮುಂದಾಳತ್ವದ ಗ್ರೀನ್ ಡಾಟ್ ಟ್ರಸ್ಟ್ ಎಂಬ ಸಂಸ್ಥೆಯು ಚೆನ್ನೈನ ದಿ ಬ್ಯಾನಿಯನ್ ಎಂಬ ಸಂಸ್ಥೆಯ ನೆರವಿನೊಂದಿಗೆ  ೨೦೨೧ರ ನವೆಂಬರ್‌ನಲ್ಲಿ ‘ಶರಾವತಿ’ ಎಂಬ ಮರಳಿ ಮನೆಗೆ ೨೦೨೨ ಮಾ.11ಕ್ಕೆ ಸ್ಥಳಾಂತರಿಸಲಾಯಿತು.

ಇಲ್ಲಿ ಚಿಕಿತ್ಸೆ ಪಡೆದ ಬಳಿಕ ಪ್ರಾರಂಭದಲ್ಲಿ ತನ್ನ ಗ್ರಾಮದ ಹೆಸರು ‘ಕಪ್‌ ಚಾಯ್’ ಅಂತ ಹೇಳಿದ್ದಾರೆ. ಆದರೆ ನಾವು, ಇವಳು ಒಂದು ಲೋಟ ಟೀ ಕೇಳುತ್ತಿದ್ದಾ ಳೆಂದು ಭಾವಿಸುತ್ತಿದ್ದೆವು. ಆದರೆ ಅನಿತಾ ಪದೇ ಪದೆ ಊರಿನ ಹೆಸರು ‘ಕಪ್‌ ಚಾಯ್’ ಎಂದು ಹೇಳುತ್ತಿದ್ದುದರಿಂದ ಗೂಗಲ್‌ನಲ್ಲಿ ಇದರ ಬಗ್ಗೆ ಮಾಹಿತಿ ಸಂಗ್ರಹಿಸ ಲಾಯಿತು. ಆಗ ಬಿಹಾರ ರಾಜ್ಯದ ದರ್ಬಾಂಗ್ ಜಿಲ್ಲೆಯಲ್ಲಿ ಈ ಗ್ರಾಮ ಇರುವುದು ತಿಳಿಯಿತು. ಮೈಸೂರಿನಿಂದ 2500 ಕಿ.ಮೀ. ದೂರದಲ್ಲಿರುವ ಗ್ರಾಮ ಇದಾಗಿದೆ.

ನಮ್ಮ ತಂಡವು ಕೆಲವು ದಿನಗಳ ನಂತರ ಬಿಹಾರ ರಾಜ್ಯದ ವೆಬ್‌ಸೈಟ್‌ನಲ್ಲಿ ‘ಕಪ್‌ಚಾಯ್’ ಗ್ರಾಮದ ಮುಖ್ಯಸ್ಥರೊಬ್ಬರ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಅವರಿಗೆ ಅನಿತಾಳ ಬಗ್ಗೆ ನಮ್ಮಲ್ಲಿದ್ದ ಸಂಪೂರ್ಣಮಾಹಿತಿಯನ್ನು ತಿಳಿಸಿ, ಅವಳ ಮೂಲ ಕುಟುಂಬಸ್ಥರನ್ನು ಹುಡುಕಿಕೊಡಲು ಮನವಿ ಮಾಡಿ ಕೊಳ್ಳಲಾಯಿತು. ಅದರಂತೆ ಅವರು ಅನಿತಾಳ ಮನೆಯ ಸದಸ್ಯರ ಆಧಾರ್ ಪ್ರತಿಗಳನ್ನು ಪಡೆದು, ಪರಿಶೀಲಿಸಿದ ನಂತರ ಖಚಿತ ಮಾಡಿಕೊಂಡರು.
ಜತೆಗೆ ವೀಡಿಯೊ ಕರೆ ಮುಖಾಂತರ ಮಾತನಾಡಿಸಿ ಅವರ ಮನೆಯವರನ್ನು ಗುರುತಿಸಲಾಯಿತು. ಹೀಗೆ 10 ವರ್ಷಗಳ ಬಳಿಕ ಅನಿತಾಳನ್ನು  ಟ್ರಸ್ಟ್‌ ತನ್ನ ತವರು ಸೇರುವಂತೆ ಮಾಡಿದೆ.

Related Posts

Leave a Reply

Your email address will not be published. Required fields are marked *