ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷ ವಯಸ್ಸಿನ ಗಂಡು ಜಿರಾಫೆ “ಯುವರಾಜ” ಇಂದು ಸಾವನ್ನಪ್ಪಿದೆ.
ಈ ಕುರಿತು ಮೈಸೂರು ಮೃಗಾಲಯವು ಮಾಹಿತಿ ನೀಡಿದ್ದು, ಸುಮಾರು 25 ವರ್ಷ ವಯಸ್ಸಿನ ಗಂಡು ಜಿರಾಫೆ “ಯುವರಾಜ ವೃದ್ದಾಪ್ಯದ ಕಾರಣ ಇಂದು ಬೆಳಗ್ಗೆ 10.30ರ ಸಮಯದಲ್ಲಿ ನಿಧನ ಹೊಂದಿದೆ.
1987ರಲ್ಲಿ ಜರ್ಮನಿಯಿಂದ ತಂದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿ.7ರಲ್ಲಿ ಜನಿಸಿದ ಯುವರಾಜ ಜಿರಾಫೆಯು ಜನಿಸಿದ ನಂತರ ಪ್ರಾಣಿಪಾಲಕರ ಕೈ ಆರೈಕೆಯಲ್ಲಿ ಬೆಳೆದ ಹಾಗೂ ಮೃಗಾಲಯದಲ್ಲಿ ಹೆಚ್ಚು ವರ್ಷ ಅಂದರೆ 25 ವರ್ಷಗಳ ಕಾಲ ಬದುಕಿದ ಜಿರಾಫೆಯಾಗಿದೆ.
ಹನಿ ಮತ್ತು ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ. ಚಾಮರಾಜ, ನರಸಿಂಹರಾಜ ಮತ್ತು ಯುವರಾಜ ಜಿರಾಫೆಗಳಲ್ಲಿ ಈವರೆಗೆ ಬದುಕಿದ ಜಿರಾಫೆ ಯುವರಾಜ ಜಿರಾಫೆಯಾಗಿದ್ದು, ಜಿರಾಫೆಯ ಸಾವು ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದ್ದು, ಮೈಸೂರು ಮೃಗಾಲಯವು ತೀವ್ರ ಸಂತಾಪವನ್ನು ಸೂಚಿಸಿದೆ ಎಂದು ತಿಳಿಸಿದೆ.


