Sunday, September 07, 2025
Menu

ಮೈಸೂರು ದಸರಾ: ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆ

ನಾಡಹಬ್ಬ ಮೈಸೂರು ದಸರಾ-2025ಕ್ಕೆ ಎಲ್ಲ ಬಗೆಯ ಸಿದ್ಧತೆ ಭರದಿಂದ ಸಾಗಿದೆ, ದಸರಾ ವೀಕ್ಷಣೆಗಾಗಿ ಸಾರ್ವಜನಿಕರಿಗೆ  ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.

ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ ಜಿಲ್ಲಾಡಳಿತವು 6500 ರೂಪಾಯಿ ಗೋಲ್ಡ್‌ ಕಾರ್ಡ್‌, ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ.

ಗೋಲ್ಡ್‌ ಕಾರ್ಡ್‌ ಪಡೆದುಕೊಂಡರೆ  ಸೆ.22 ರಿಂದ ಅ.2 ರವರೆಗೆ ನಡೆಯಲಿರುವ ದಸರಾದ ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದು. ದಸರಾ ವಿಶೇಷಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಅವರು ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದಾರೆ.

ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳ ಮಾರಾಟ ಆರಂಭವಾಗಿದೆ. ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ದರವಿದ್ದರೆ, ಜಂಬೂಸವಾರಿ ಟಿಕೆಟ್ ದರ 3500 ರೂ. ಹಾಗೂ ಪಂಜಿನ ಕವಾಯತು ಟಿಕೆಟ್‌ ದರ 1500 ರೂ. ಇದೆ. ಆನ್‌ಲೈನ್‌ನಲ್ಲೂ ಟಿಕೆಟ್‌ ​ ಪಡೆಯಬಹುದು. ದಸರಾ ಗೋಲ್ಡ್‌ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in/ ಮೂಲಕ ಖರೀದಿಸಲು ವ್ಯವಸ್ಥೆಗೊಳಿಸಲಾಗಿದೆ.

https://mysoredasara.gov.in/ ಅಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3ರಿಂದಲೇ ಟಿಕೆಟ್‌ಗಳು ಖರೀದಿಗೆ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ. ಗೋಲ್ಡ್​ ಕಾರ್ಡ್​ ಖರೀದಿಸಿರುವವರೆಗೆ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ ವಿಶೇಷ ದರ್ಶನ, ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ.

Related Posts

Leave a Reply

Your email address will not be published. Required fields are marked *