ಮ್ಯಾನ್ಮರ್ ನಲ್ಲಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 2000 ದಾಟಿದ್ದು, ಒಂದು ವಾರ ಮೌನಾಚರಣೆಗೆ ಸರ್ಕಾರ ಆದೇಶಿಸಿದೆ.
ಭೀಕರ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆಯಾಗಿದ್ದು, ಇನ್ನೂ 219 ಮಂದಿ ನಾಪತ್ತೆಯಾಗಿ ದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಭವಿಸಿದ ಭೀಕರ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 2056 ಆಗಿದ್ದು, 3700 ಮಂದಿ ಗಾಯ ಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಮ್ಯಾನ್ಮರ್ ಜುಂಟಾ ಸರ್ಕಾರ ಒಂದು ವಾರಗಳ ಮೌನಾ ಚರಣೆ ಘೋಷಿಸಿದೆ.
ಬ್ಯಾಂಕಾಕ್ ನಲ್ಲಿ ಕೂಡ ಹಲವು ಕಟ್ಟಡಗಳು ಧರೆಗುರುಳಿದ್ದು, 70 ಮಂದಿ ಇನ್ನೂ ಕಟ್ಟಡಗಳ ಆವಶೇಷಗಳಡಿ ಸಿಲುಕಿ ದ್ದಾರೆ. ಅವರ ರಕ್ಷಣಾ ಕಾರ್ಯ ಮುಂದುವರಿದಿದೆ. ಸೋಮವಾರ ಬೆಳಿಗ್ಗೆ ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಮಹಿಳೆ ಯೊಬ್ಬರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿತ್ತು.