ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಗೋದಾಮಿಗೆ ಕರೆಸಿಕೊಂಡ ವ್ಯಕ್ತಿ ರೇಣುಕಾಸ್ವಾಮಿಯನ್ನು ಸಾಯಿಸದಂತೆ ನಿನ್ನ ಸಾಯಿಸುವುದಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಂಗಳೂರಿನ ಚಂದ್ರಾಲೇಔಟ್ನಲ್ಲಿ ನಡೆದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಇದೇ ಮಾದರಿಯಲ್ಲಿ ಸಾಯಿಸುತ್ತೇನೆ ಎಂಬ ಬೆದರಿಕೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರಾಗಿದ್ದು, ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಕಂಪನಿ ನಷ್ಟವಾಗಿ ಪ್ರಕರಣ ಸಿಐಡಿಯಲ್ಲಿದೆ. ಬಾಗೇಗೌಡನ ನಂಬಿ ಹಣ ಹೂಡಿಕೆ ಮಾಡಿರುವುದರಿಂದ ನಷ್ಟವಾಗಿದೆ ಎಂದು ಮಂಜುನಾಥ್ ಕೋಪಗೊಂಡಿದ್ದು, ಹೇಗಾದರೂ ಮಾಡಿ ಅಷ್ಟು ಹಣ ವಸೂಲಿ ಮಾಡಬೇಕೆಂದು ಪ್ಲ್ಯಾನ್ ಮಾಡಿ ಬಾಗೇಗೌಡನನ್ನು ಹೋಟೆಲ್‌ಗೆ ಕರೆಸಿಕೊಂಡಿದ್ದಾನೆ. ನಂತರ ಆಚೆ ಹೋಗಿ ಬರೋಣ ಎಂದು ಗೋದಾಮಿಗೆ ಕರೆದೊಯ್ದಿದ್ದಾನೆ. ಗೋದಾಮಿಗೆ 8 ಜನರನ್ನು ಕರೆಸಿ ಹಣ ಕೊಡುವಂತೆ ಬಾಗೇಗೌಡನ ಮೇಲೆ ಹಲ್ಲೆ ಮಾಡಿದ್ದಾನೆ. ಒಂದು ವೇಳೆ ಹಣ ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಆಗ್ತೀಯಾ ಎಂದು ಬೆದರಿಕೆಯೊಡ್ಡಿದ್ದಾನೆ.
44 ಲಕ್ಷದಷ್ಟು ಹಣ ಕೊಡಬೇಕು ಎಂದು ಬಾಗೇಗೌಡನಿಂದ ಬಲವಂತವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದು, ಬಾಗೇಗೌಡನ ಬಾಮೈದನಿಂದ ಚೆಕ್ ತರಿಸಿ ಮಂಜುನಾಥ್ ಸಹಿ ಮಾಡಿಸಿಕೊಂಡಿದ್ದಾನೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


