Thursday, December 11, 2025
Menu

ಕೆನ್ನೆಗೆ ಹೊಡೆದಿದ್ದಕ್ಕೆ ಕೊಲೆ: ಶವದ ಜೊತೆ ಸೆಲ್ಫಿ ವೀಡಿಯೊ ಮಾಡಿದ್ದ ಆರೋಪಿ ಅರೆಸ್ಟ್!

hassan murder case

ಹಾಸನ: ಎಣ್ಣೆ ಮತ್ತಲ್ಲಿ ಸ್ನೇಹಿತನನ್ನು ಹತ್ಯೆಗೈದು ಸೆಲ್ಫಿ ವೀಡಿಯೋ ಮಾಡಿದ್ದ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಡಿ.8 ರಂದು ಕೊಲೆ ಪ್ರಕರಣದಲ್ಲಿ ಆಟೋ ಚಾಲಕ ಉಲ್ಲಾಸ್ (21) ನನ್ನು ಬಂಧಿಸಲಾಗಿದೆ.

ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಅತಿಯಾಗಿ ಮದ್ಯ ಸೇವಿಸಿ ಮಾತನಾಡುವಾಗ ಉಲ್ಲಾಸ್ ಕೆನ್ನೆಗೆ ಕೀರ್ತಿ ಬಾರಿಸಿದ್ದ. ಇದರಿಂದ ಕೋಪಗೊಂಡಿದ್ದ ಉಲ್ಲಾಸ್, ಮತ್ತೆ ಕುಡಿಯಲು ಆಟೋದಲ್ಲಿ ಕೀರ್ತಿ ಜೊತೆ ಇನ್ನಿಬ್ಬರನ್ನು ಕರೆದೊಯ್ದಿದ್ದ. ಬಳಿಕ ಜಗಳ ಆರಂಭಿಸಿ ಕೀರ್ತಿ ಮೇಲೆ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಮದ್ಯದ ನಶೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದ.

ಡಿ.9 ರಂದು ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿಗಳಿಗೆ ಶೋಧ ನಡೆಸಿದ್ದರು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *