ದಾವಣಗೆರೆ ಆಸ್ಪತ್ರೆಯ ಆವರಣದಲ್ಲಿ ಹೃದಯಘಾತದಿಂದ ಕುಸಿದು ಬಿದ್ದು ಪುರಸಭೆ ಅಧ್ಯಕ್ಷ ಮೃತಪಟ್ಟಿದ್ದಾರೆ. ಹರಿಹರ ತಾಲೂಕಿನ ಮಲೆಬೆನ್ನೂರು ಪುರಸಭೆ ಅಧ್ಯಕ್ಷ ಹನುಮಂತಪ್ಪ(47) ಮೃತಪಟ್ಟವರು. ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗಿನ ಜಾವ ಹನುಮಂತಪ್ಪ ಆಸ್ಪತ್ರೆಗೆ ತೆರಳಿದ್ದರು.
ಒಬ್ಬರೇ ಬೈಕ್ ನಲ್ಲಿ ತೆರಳಿದ್ದ ಹನುಮಂತಪ್ಪ ಆಸ್ಪತ್ರೆಯ ಬಾಗಿಲ ಮುಂದೆಯೇ ಹೃದಯಘಾತವಾಗಿ ಅಸು ನೀಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಅದನ್ನು ನಿರ್ಲಕ್ಷಿಸಿದ್ದ ಹನುಮಂತಪ್ಪ ಪ್ರಾಣ ಕಳೆದುಕೊಂಡಿದ್ದಾರೆ.
ಚಳ್ಳಕೆರೆಯಲ್ಲಿ ಯುವಕನ ಮೇಲೆ ಹೆಜ್ಜೇನು ದಾಳಿ
ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ಯುವಕನ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡು ಅವಿನಾಶ್ (27) ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗೆರೆ ಗ್ರಾಮದ ಅವಿನಾಶ್ (27) ಜೇನು ದಾಳಿಗೆ ಒಳಗಾದ ಯುವಕ. ಅಡಿಕೆತೋಟದಲ್ಲಿ ಎಮ್ಮೆ ಮೇಯಿಸುವಾಗ ಹೆಜ್ಜೇನು ದಾಳಿ ಮಾಡಿದೆ. ಅವಿನಾಶರನ್ನು ರಕ್ಷಿಸಲು ಬಂದ ಮಹೇಶ್ ಅವರಿಗೂ ಜೇನು ಕಡಿದಿದೆ. ಗಾಯಾಳುಗಳಿಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


