ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಡಿದ ಎಡವಟ್ಟು ಯುವಕನೊಬ್ಬನ ಜೀವನದ ದಿಕ್ಕನ್ನೇ ತಪ್ಪಿಸಿದೆ.
ಪ್ರಕರಣ ಸಂಬಂಧ ಶಂಕಿತ ಆರೋಪಿ, ಟೂರ್ಸ್ ಕಂಪನಿ ಆಕಾಶ್ ಕನೋಜಿಯಾ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ತನಿಖೆಯಲ್ಲಿ ಆಕಾಶ್ ನಿಜವಾದ ಆರೋಪಿ ಅಲ್ಲ ಎಂದು ತಿಳಿದು ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ. ಶಂಕಿತ ಆರೋಪಿಯಾಗಿ ಬಂಧಿಸಿದ್ದರಿಂದ ತನ್ನ ಜೀವನ ನಾಶವಾಗಿದೆ ಚಾಲಕ ಆಕಾಶ್ ಕನೋಜಿಯಾ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ನೌಕರಿ ಕಳೆದುಹೋಗಿ, ಮದುವೆ ರದ್ದಾಗಿದೆ, ಕುಟುಂಬಕ್ಕೆ ಮಾನಹಾನಿಯಾಗಿದೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.
ಮುಂಬೈ ಪೊಲೀಸರ ಈ ತಪ್ಪಿನಿಂದ ನನ್ನ ಜೀವನ ನಾಶವಾಯಿತು. ಸೈಫ್ ಕಟ್ಟಡದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣುವ ವ್ಯಕ್ತಿ ನಾನಲ್ಲ ಎಂದು ಎಷ್ಟೇ ಒತ್ತಾಯಿಸಿದರೂ ಪೊಲೀಸರು ಕೇಳಲಿಲ್ಲ ಎಂದು ಆಕಾಶ್ ಹೇಳಿದ್ದಾರೆ. ಹುಡುಗಿ ನೋಡಲು ಹೋದಾಗ ನನ್ನನ್ನು ಬಂಧಿಸಿ ಪೊಲೀಸರು ರಾಯಪುರಕ್ಕೆ ಕರೆದೊಯ್ದರು. ಮುಂಬೈ ಪೊಲೀಸರ ತಂಡ ಅಲ್ಲಿಗೆ ಬಂದು ನನ್ನ ಥಳಿಸಿತು. ತನಿಖೆಯಲ್ಲಿ ಸತ್ಯ ಬಹಿರಂಗವಾದಾಗ ನನ್ನನ್ನು ಬಿಡುಗಡೆ ಮಾಡಿದೆ. ಆದರೆ ಬದುಕು ಹಾಳಾಗಿ ಹೋಗಿದೆ ಎಂದಿದ್ದಾರೆ.
ಪೊಲೀಸರು ನನ್ನನ್ನು ಬಂಧಿಸಿ ಬಿಡುಗಡೆಗೊಳಿಸಿದ ನಂತರ ನನ್ನ ಬಾಸ್‌ಗೆ ಕರೆ ಮಾಡಿದಾಗ, ಅವರು ನನ್ನನ್ನು ಕೆಲಸಕ್ಕೆ ಬರಬೇಡಿ ಎಂದು ಹೇಳಿದರು. ನನ್ನ ಮಾತನ್ನು ಕೇಳಲೂ ನಿರಾಕರಿಸಿದರು. ನನ್ನ ಮದುವೆಯೂ ರದ್ದಾಗಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.