ಸಂಸದ ಸುಧಾಕರ್ ಗೆ ಸೇರಿದ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಕಿಟಕಿ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳ ಮೂಲದ ವಿದ್ಯಾರ್ಥಿ ಮಹಮದ್ ಶಬೀರ್ (26) ಆತ್ಮಹತ್ಯೆ ಮಾಡಿಕೊಂಡವ. ಸಂಸದ ಸುಧಾಕರ್ ಗೆ ಸೇರಿದ ಶಾಂತ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನಲಿ ಈ ದುರಂತ ನಡೆದಿದೆ.
ಈತ ಕಾಲೇಜಿನಲ್ಲಿ ಟೆಕ್ನಿಷಿಯನ್ ಕೋರ್ಸ್ ಅಧ್ಯಯನ ಮಾಡುತ್ತಿದ್ದ. ಹಾಸ್ಟೆಲ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಪೆರೇಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಯಲಹಂಕದಲ್ಲಿ ವಿದೇಶಿ ಪ್ರಜೆಗಳಿಂದ ಡ್ರಗ್ಸ್ ವಶ
ಯಲಹಂಕದ ದೊಡ್ಡಬೆಟ್ಟಹಳ್ಳಿ ಗ್ರಾಮದ ಮನೆಯಿಂದ ಯಲಹಂಕ ಉಪನಗರ ಪೊಲೀಸರು 70 ಲಕ್ಷ ಮೌಲ್ಯದ 700 ಗ್ರಾಂ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಶೇಖರಿಸಿಟ್ಟಿದ್ದ ಇಬ್ಬರು ಘಾನಾ ದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ. ಅಡ್ಮ್ಮಾಕೊ ಬ್ರೈಟ್ ಮತ್ತು ಎನ್ಕೇಟೈ ಕೋಫಿ ಬಂಧಿತರು.
ಮಾಹಿತಿ ಆಧರಿಸಿ ನಗರದ 7 ಕಡೆ ಪೊಲೀಸರು ದಾಳಿ ನಡೆಸಿದ್ದಾರೆ. ಪಾಸ್ ಪೋರ್ಟ್ ಅವಧಿ ಮೀರಿ ವಾಸ ಮಾಡ್ತಿದ್ದ ಒಂಬತ್ತು ವಿದೇಶಿಗರನ್ನು ಕೂಡ ಬಂಧಿಸಿದ್ದಾರೆ. ಇಬ್ಬರು ಮಹಿಳಾ ವಿದೇಶಿಗಳ ಮನೆಯಲ್ಲೂ ಡ್ರಗ್ಸ್ ಪತ್ತೆಯಾಗಿದ್ದು, 800 ಗ್ರಾಂ ವಿವಿಧ ಮಾದರಿ ಡ್ರಗ್ಸ್ ವಶಕ್ಕೆ ಪಡೆದು ಬೆನೆಡಿಕ್ಟ್ ಮತ್ತು ಪ್ರಿಸ್ಕಿಲ್ ಎಂಬ ಮಹಿಳೆಯರನ್ನು ಬಂಧಿಸಿದ್ದಾರೆ.
ಮಂಡ್ಯದಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ
ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ವಿಟಠಲಪುರ ಗ್ರಾಮದ ಬಳಿ ಕೆಸ್ಸಾರ್ಟಿಸಿ ಬಸ್ ಕಂಡಕ್ಟರ್ ಮೇಲೆ ಬೈಕ್ ಸವಾರರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಸ್ ಅಡ್ಡಗಟ್ಟಿದ ಯುವಕರು ಬಸ್ ಕಂಡಕ್ಟರ್ ಜಗದೀಶ್ ಅವರನ್ನು ಥಳಿಸಿದ್ದಾರೆ. ಗಾಯಗೊಂಡ ಕಂಡಕ್ಟರ್ ಜಗದೀಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೆಎಸ್ಆರ್ಟಿಸಿ ನೌಕರರು ಆಗ್ರಹಿಸಿದ್ದಾರೆ