Wednesday, February 11, 2026
Menu

ಹಾವೇರಿಯ ಯುವಕನ ವಂಚಿಸಿ ಮದುವೆಯಾದ ಎರಡು ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯಾಗಿರುವ ವಿವಾಹಿತ ಮಹಿಳೆಯೊಬ್ಬಳು ಈ ಬಗ್ಗೆ ಯಾವುದೇ ಸುಳಿವು ನೀಡದೆ ಯುವಕನಿಗೆ ಮೋಸ ಮಾಡಿ ಆತನನ್ನು ಮದುವೆಯಾಗಿರುವ ಘಟನೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

ವಂಚಕ ಮಹಿಳೆ ಯುವಕನ ಮದುವೆಯಾಗಿದ್ದಲ್ಲದೆ 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾಳೆ. ರವಿಚಂದ್ರ ಎಂಬ ಯುವಕ ಮೋಸ ಹೋದಾತ. ಪಾವಗಡ ಮೂಲದ ರೇಖಾ ಎಂಬ ಮಹಿಳೆ ಆತನನ್ನು ಕಳೆದ ವಾರ ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.

ಮದುವೆಯಾಗಿ ಕೆಲವು ದಿನ ಕಳೆಯಬೇಕಾದರೆ ಆಕೆಯ ಮೊಬೈಲ್‌ಗೆ ಕರೆ ಮಾಡಿದ ಮಕ್ಕಳು ‘ನಾವು ರೇಖಾ ಮಕ್ಕಳು’ ಎಂದು ಹೇಳಿದಾಗ ರವಿಚಂದ್ರ ಕುಟುಂಬಕ್ಕೆ ವಿಷಯ ತಿಳಿದಿದೆ. ಯುವಕನ ಮನೆಯವರಿಗೆ ತನ್ನ ವಂಚನೆ ಗೊತ್ತಾಯಿತು ಎಂಬುದು ತಿಳಿದ ರೇಖಾ ತುಮ್ಮಿನಕಟ್ಟಿ ಗ್ರಾಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾಳೆ.

ರವಿಚಂದ್ರ ಹಾಗೂ ಗ್ರಾಮಸ್ಥರು ರೇಖಾಳನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Related Posts

Leave a Reply

Your email address will not be published. Required fields are marked *