Menu

ಪಿಯುಸಿ ವಿದ್ಯಾರ್ಥಿಯನ್ನು 3ನೇ ಮದುವೆಯಾದ 3 ಮಕ್ಕಳ ತಾಯಿ

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮೂವರು ಹೆಣ್ಣುಮಕ್ಕಳ ತಾಯಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಮೂರನೇ ಮದುವೆಯಾಗಿ ಸುದ್ದಿಯಾಗಿದ್ದಾಳೆ. ಈ ಮೊದಲು ಶಬ್ನಮ್ ಆಗಿದ್ದ ಮಹಿಳೆ ಈಗ ಮತಾಂತರಗೊಂಡು ಹೆಸರನ್ನು ಶಿವಾನಿ ಎಂಬುದಾಗಿ ಬದಲಾಯಿಸಿಕೊಂಡಿದ್ದಾಳೆ.

ಶಬ್ನಮ್ ಪಕ್ಕದ ಮನೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು, ಎರಡನೇ ಗಂಡನಿಗೆ ವಿಚ್ಛೇದನ ನೀಡಿ ಮೂವರು ಹೆಣ್ಣು ಮಕ್ಕಳನ್ನು ಆತನ ಬಳಿಯೇ ಬಿಟ್ಟು ಸ್ಥಳೀಯ ದೇವಸ್ಥಾನವೊಂದರಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ.

ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳ ನಡುವೆ ಪಂಚಾಯಿತಿ ನಡೆದಿತ್ತು, ಮಹಿಳೆ ವಯಸ್ಕಳಾಗಿರುವುದರಿಂದ ಅವಳು ಬಯಸಿದ ಸ್ಥಳದಲ್ಲಿ ವಾಸಿಸಲು ಸ್ವತಂತ್ರಳು ಎಂದು ನಿರ್ಧರಿಸಲಾಯಿತು. ಶಿವಾನಿ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದು, ಈ ನಿರ್ಧಾರದಿಂದ ತೃಪ್ತಳಾಗಿರುವುದಾಗಿ ಹೇಳಿದ್ದಳು. ವಿದ್ಯಾರ್ಥಿ ಕೂಡ ಅದನ್ನೇ ಹೇಳಿದ್ದು, ತಾವು ಸಂತೋಷವಾಗಿದ್ದೇವೆ ಮತ್ತು ಹಸ್ತಕ್ಷೇಪ ಬಯಸುವುದಿಲ್ಲ ಎಂದು ಹೇಳಿದ್ದಾನೆ.

ಇದಕ್ಕೂ ಮೊದಲು ಶಬ್ನಮ್ ಅಲಿಗಢದಲ್ಲಿ ಮದುವೆಯಾಗಿದ್ದು, ನಂತರ ದಂಪತಿ ವಿಚ್ಛೇದನ ಪಡೆದರು. ಎರಡನೇ ಮದುವೆ ಸುಮಾರು ಎಂಟು ವರ್ಷಗಳ ಹಿಂದೆ ನಡೆದಿತ್ತು. ಒಂದು ವರ್ಷದ ಹಿಂದೆ ಪತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಂಗವಿಕಲರಾದರು, ನಂತರ ಆಕೆಯ ಸಂಬಂಧ ಬಾಲಕನೊಂದಿಗೆ ಶುರುವಾಗಿತ್ತು ಎಂದು ಹೇಳಲಾಗಿದೆ. ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕಬೇಕೆಂದು ಆಶಿಸುತ್ತೇವೆ ಎಂದು ಬಾಲಕನ ತಂದೆ ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸು ವುದಾಗಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *