ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಮಾಡೆಲ್ ಮಾಡಬೇಕೆಂಬ ಆಸೆಗೆ ಬಿದ್ದು 3.74 ಲಕ್ಷ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸುಮಾ 3.74 ಲಕ್ಷ ರೂ. ಕಳೆದುಕೊಂಡ ಮಹಿಳೆ. ಸುಮಾ ಸಾಮಾಜಿಕ ಜಾಲತಾಣದಲ್ಲಿ ಚೈಲ್ಡ್ ಮಾಡೆಲ್ ಜಾಹೀರಾತು ನೋಡಿದ್ದರು.
ಲಿಟ್ಲ್ ನೆಸ್ಟ್ ಎಂಬ ಚೈಲ್ಡ್ ಮಾಡೆಲಿಂಗ್ ಲಿಂಕ್ ಫೇಸ್ ಬುಕ್ ಪೇಜ್‌ನಲ್ಲಿ ಬಂದಿತ್ತು. ಕ್ಲಿಕ್ ಮಾಡಿದ್ದಾಗ ಲಿಂಕ್ ಮೂಲಕವೇ ಮಗುವಿನ ದಾಖಲೆಗಳನ್ನು ಪಡೆದುಕೊಂಡಿದ್ದ ವಂಚಕರು ಬಳಿಕ ಟೆಲಿಗ್ರಾಂ ಗ್ರೂಪ್‌ಗೆ ಸೇರಿಕೊಳ್ಳಿ ಎಂದು ಮತ್ತೊಂದು ಲಿಂಕ್ ಕಳಿಸಿದ್ದರು.
ಟಾಸ್ಕ್ ನೀಡಿ 11,000 ರೂ. ಕಳಿಸಿ ಎಂದು ತಿಳಿಸಿದ್ದ ಅಡ್ಮಿನ್ ಹೂಡಿಕೆ ಮಾಡಿದ ಬಳಿಕ 19 ಸಾವಿರ ವಾಪಸ್ ನೀಡಿದ್ದ. ಬಳಿಕ ವಂಚಕರು ಹಂತ ಹಂತವಾಗಿ ಮೂರು ಮುಕ್ಕಾಲು ಲಕ್ಷ ರೂ. ದೋಚಿದ್ದಾರೆ. ಸತ್ಯ ಅರಿವಾದ ಮಹಿಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡೇಟಿಂಗ್ ಆ್ಯಪ್: ಯುವಕನ ಚಿನ್ನಾಭರಣ, ಹಣ ದೋಚಿದ ಯುವತಿ
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಲಾಡ್ಜ್‌ಗೆ ಕರೆದೊಯ್ದ ಯುವತಿ ಪ್ರಜ್ಞೆ ತಪ್ಪಿಸಿ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ನಡೆದಿದೆ.
ಸಂತ್ರಸ್ತ ನೀಡಿದ ದೂರಿನ ಅನ್ವಯ ಕವಿಪ್ರಿಯಾ ಎಂಬಾಕೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪೀಣ್ಯದ ನಾಗಸಂದ್ರದ ಪೇಯಿಂಗ್ ಗೆಸ್ಟ್ ನಲ್ಲಿ ವಾಸವಾಗಿದ್ದ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ‘ಹ್ಯಾಪನ್ ಆ್ಯಪ್’ ಹೆಸರಿನ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಪರಿಚಯ ಆಗಿತ್ತು.
ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್‌ವೊಂದರಲ್ಲಿ ಭೇಟಿಯಾಗಿ ಪಾರ್ಟಿ ಮಾಡಿದ್ದಾರೆ. ಮದ್ಯ ಸೇವನೆ ಬಳಿಕ ಪಿಜಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಯುವತಿ ಲಾಡ್ಜ್ ಬುಕ್ ಮಾಡಿದ್ದಳು. ಊಟ ಸೇವಿಸಿದ ನಂತರ ಯುವತಿ ಕೊಟ್ಟ ನೀರು ಕುಡಿದ ಬಳಿಕ ವ್ಯಕ್ತಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಚಿನ್ನದ ಸರ, ಕೈಬಳೆ ಸೇರಿದಂತೆ 58 ಗ್ರಾಂ ಚಿನ್ನಾಭರಣ, 10 ಸಾವಿರ ನಗದು ದೋಚಿ ಯುವತಿ ಪರಾರಿಯಾಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ತಮಿಳುನಾಡಿನ ಕರೂರಿನ ಕವಿಪ್ರಿಯಾ ಮತ್ತು ಆಕೆಯ ಗೆಳೆಯ ಹರ್ಷವರ್ಧನ್ ಎಂಬಾತನನ್ನು ಬಂಧಿಸಿದ್ದಾರೆ. ಇವರಿಬ್ಬರು ಐಷಾರಾಮಿ ಜೀವನ ನಡೆಸಲು ಆ್ಯಪ್‌ಗಳಲ್ಲಿ ಸಾಲ ಪಡೆದಿದ್ದರು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಡೇಟಿಂಗ್ ಆ್ಯಪ್ ಮೂಲಕ ವಂಚನೆ ಪಿತೂರಿ ನಡೆಸಿದ್ದರು.


