ಪಿರಿಯಾಪಟ್ಟಣ : ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಹೆತ್ತ ತಾಯಿಯೇ ಹಸು ಗೂಸನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.
9 ದಿನದ ಮಗು ಮತ್ತು ಎರಡು ವರ್ಷದ ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯೇ ಅರ್ಬಿಯಾ ಬಾನು. ಈಕೆಯನ್ನು ಕಳೆದ ಮೂರು ವರ್ಷಗಳ ಹಿಂದೆ ಅರೇನಹಳ್ಳಿ ಸೈಯದ್ ಮುಸಾವೀರ್ ಎಂಬ ವ್ಯಕ್ತಿಗೆ ವಿವಾಹ ಮಾಡಿದ್ದು, ಎರಡನೇ ಮಗುವಿನ ಹೆರಿಗೆ ಗೆಂದು ತನ್ನ ತಾಯಿಯ ಮನೆಯಾದ ಬೆಟ್ಟದಪುರಕ್ಕೆ ಬಂದಿದ್ದರು. ಕಳೆದ 9 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ್ದು ತಾಯಿಯ ಮನೆಯಲ್ಲಿಯೇ ಇದ್ದರು.
ಶನಿವಾರ ಬೆಳಿಗ್ಗೆ ರೂಮಿನ ಒಳಗಡೆ ಹೋಗಿ 8 ದಿನಗಳ ಹಸು ಗೂಸನ್ನು ಮತ್ತು ಎರಡು ವರ್ಷದ ಅನಮ್ ಫಾತಿಮಾ ಮಗುವಿನ ಕತ್ತನ್ನು ಕುಯ್ದು ತಾನು ಕೂಡ ಕತ್ತು ಕುಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಂತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆ ವಿವರಗಳನ್ನು ಪಡೆದುಕೊಂಡರು ನಂತರ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಮಾತನಾಡಿ ಸ್ಥಳ ಪರಿಶೀಲನೆ ಮಾಡಿದಾಗ ಬಾಗಿಲನ್ನು ಹಾಕಿಕೊಂಡು ಎಂಟು ದಿನದ ಮಗು ಮತ್ತು ಮೂರು ವರ್ಷದ ಮಗುವನ್ನು ಸಾಯಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಿ ಸತ್ಯ ಅಸತ್ಯತೆಯನ್ನು ತಿಳಿಯಲಾಗುವುದು ಎಂದು ತಿಳಿಸಿದರು.
ಘಟನೆ ಬಗ್ಗೆ ಮೃತಳ ತಂದೆ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ನನ್ನ ಮಗಳಿಗೆ ಮೊದಲನೇ ಮಗು ಅಂಗವಿಕಲೆಯಾಗಿದ್ದು ನಂತರ ಹುಟ್ಟಿದ್ದು ಕೂಡ ಹೆಣ್ಣು ಮಗುವಾಗಿದ್ದು ಈ ಬಗ್ಗೆ ಬೇಸರಗೊಂಡು ಈ ಕೃತ್ಯವೆಸಗಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಇಲಾಖೆ ತನಿಖೆ ಮುಂದುವರೆಸುತ್ತಿದ್ದಾರೆ.
ಈ ವೇಳೆ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ, ವೃತ್ತ ನಿರೀಕ್ಷಕ ದೀಪಕ್, ಬೆಟ್ಟದಪುರ ಠಾಣೆಯ ಆರಕ್ಷಕ ಉಪನಿರೀಕ್ಷಕ ಅಜಯ್ ಕುಮಾರ್ ಹಾಜರಿದ್ದರು.


