ಮೂರು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ತಾಯಿ ಶಾರದಾ, ಮಕ್ಕಳಾದ ಅಮೃತಾ, ಆದರ್ಶ ಮತ್ತು ಅನುಷ್ಕಾ ಮೃತಪಟ್ಟಿದ್ದಾರೆ.
ಮೂರು ಮಕ್ಕಳೊಂದಿಗೆ ತಾಯಿ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಶವಗಳಿಗೆ ಶೋಧ ಕಾರ್ಯ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.