ಕೊಪ್ಪಳದ ಕುಕನೂರು ತಾಲೂಕಿನ ಬೆನಕಲ್ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯೊಂದು ನಡೆದಿದೆ. ಮಕ್ಕಳಾದ ರಮೇಶ್(4), ಜಾನು(2)ವನ್ನು ಹತ್ಯೆ ಮಾಡಿದ ಬಳಿಕ ತಾಯಿ ತಾಯಿ ಲಕ್ಷ್ಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಕೊಪ್ಪಳ ಎಸ್ಪಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಣಕಲ್ ಗ್ರಾಮದಲ್ಲಿ ಲಕ್ಷ್ಮವ್ವ ಬಜಂತ್ರಿ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳಿಗೆ ನೇಣು ಬಿಗಿದು ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಸಂಬಂಧ ಇದುವರೆಗೂ ಯಾರು ದೂರು ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಈ ಸಮಯದಲ್ಲಿ ಲಕ್ಷ್ಮವ್ವ ಅವರ. ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಮನೆಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಹೇಳಲಾಗುತ್ತಿದೆ, ದೂರು ಕೊಟ್ಟ ಬಳಿಕ ಪರಿಶೀಲನೆ ನಡೆಸುವುದಾಗಿ ಎಸ್ಪಿ ರಾಮ್ ಅರಸಿದ್ದಿ ಹೇಳಿದ್ದಾರೆ. ಲಕ್ಷ್ಮವ್ವ ಅವರ ಕೈಲಿದ್ದ ಬಳೆಯಲ್ಲಿ ಮುಚ್ಚಿದ ಲಕೋಟೆ ಪತ್ತೆ ಆಗಿದೆ. ಸಾಯುವ ಮುನ್ನ ಬರೆದ ಪತ್ರವನ್ನು ಕೈ ಬಳೆಯಲ್ಲಿ ಇಟ್ಟುಕೊಂಡಿದ್ದಾರೆ. ಮೂವರ ಸಾವಿನ ರಹಸ್ಯ ಪತ್ರದಲ್ಲಿ ಇರುವ ಸಾಧ್ಯತೆ ಇದೆ.
ಲಕ್ಷ್ಮವ್ವ ತನ್ನದೇ ಗ್ರಾಮದ ಬೀರಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ಅಕ್ರಮ ಸಂಬಂಧವೇ ಈ ಸಾವುಗಳಿಗೆ ಕಾರಣ. ಬೀರಪ್ಪನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಲಕ್ಷ್ಮವ್ವನ ತಾಯಿ ಆಗ್ರಹಿಸಿದ್ದಾರೆ. ಗಂಡ ಮತ್ತು ಮಕ್ಕಳನ್ನು ಬಿಟ್ಟು ತನ್ನೊಂದಿಗೆ ಬರುವಂತೆ ಲಕ್ಷ್ಮೀ ಮೇಲೆ ಬೀರಪ್ಪ ಒತ್ತಡ ಹಾಕುತ್ತಿದ್ದಎಂದು ತಿಳಿಸಿದ್ದಾರೆ.
ಕಾರು ಡಿಕ್ಕಿ: ಆಟವಾಡುತ್ತಿದ್ದ ಎರಡು ವರ್ಷದ ಮಗು ಸಾವು
ಶಿವಮೊಗ್ಗ ಹೊರವಲಯದ ವಿರುಪಿನಕೊಪ್ಪದ ರಸ್ತೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದೆ. ವಿನಯ್ ಮೃತ ಮಗು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಗಂಗೂರು ಕಡೆಯಿಂದ ಸಾಗರ ರಸ್ತೆಯತ್ತ ಕಾರು ಚಲಿಸುತ್ತಿರುವಾಗ ಡಿಕ್ಕಿಯಾಗಿ ಮಗು ವಿನಯ್ನ ತಲೆ ಮತ್ತು ಕೈ ಸೇರಿದಂತೆ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸು ನೀಗಿದೆ.


