Menu

ಗುಜರಾತ್ ನಲ್ಲಿ ಅಕ್ರಮ ವಲಸಿಗರ 800ಕ್ಕೂ ಹೆಚ್ಚು ವಲಸಿಗರ ಮನೆ ನೆಲಸಮ!

buldozer

ಪಹಲ್ಗಾಮ್‌ ಉಗ್ರರ ದಾಳಿ ಬೆನ್ನಲ್ಲೇ ಗುಜರಾತ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದ್ದು, 800ಕ್ಕೂ ಹೆಚ್ಚು ಮನೆ ನೆಲಸಮ ಮಾಡಲಾಗಿದೆ.

ದೇಶದಲ್ಲೇ ನಡೆದ ಅತಿ ದೊಡ್ಡ ಅಕ್ರಮ ಬುಲ್ಡೋಜರ್‌ ಕಾರ್ಯಾಚರಣೆ ಇದಾಗಿದೆ. ಅದಕ್ಕಾಗಿ 74 ಬುಲ್ಡೋಜರ್‌ಗಳು, 200 ಟ್ರಕ್‌ಗಳು, 1,800 ಕಾರ್ಮಿಕರು, 3000 ಪೊಲೀಸ್‌ ಅಧಿಕಾರಿಗಳು ಆಪರೇಷನ್‌ನ ಭಾಗವಾಗಿದ್ದರು. ಬಾಂಗ್ಲಾ ಅಕ್ರಮ ವಲಸಿಗರ (Illegal Bangladeshi Nationals) ಮನೆಗಳನ್ನು ಉಡೀಸ್‌ ಮಾಡಿಸಿದ್ದಾರೆ.

ಚಂಡೋಲಾ ಸರೋವರವು ಅಹಮದಾಬಾದ್‌ನಲ್ಲಿ ಅತಿ ಹೆಚ್ಚು ಬಾಂಗ್ಲಾದೇಶದ ಒಳನುಸುಳುವವರನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದಿಂದ 800 ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ‌

ಕಾರ್ಯಾಚರಣೆ ಸಂಬಂಧ ತುರ್ತು ವಿಚಾರಣೆ ನಡೆಸಬೇಕು ಎಂದು 18 ಅರ್ಜಿದಾರರು ಗುಜರಾತ್‌ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಹಲವರು ನಿವಾಸಿಗಳು ಬಾಂಗ್ಲಾದೇಶಿಗಳಲ್ಲ. ಅವರ ಮನೆಗಳನ್ನು ತಪ್ಪಾಗಿ ನೆಲಸಮ ಮಾಡಲಾಗುತ್ತಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಯಾರೊಬ್ಬರ ವಿದೇಶಿ ಸ್ಥಾನಮಾನವನ್ನು ನಿರ್ಧರಿಸುವುದು ವಿದೇಶಿಯರ ನ್ಯಾಯಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ, ಸರಿಯಾದ ಕಾನೂನು ಆಧಾರವಿಲ್ಲದೆ ಮನೆಗಳನ್ನು ನೆಲಸಮಗೊಳಿಸುವುದನ್ನು ಸಮರ್ಥಿಸಲಾಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

Related Posts

Leave a Reply

Your email address will not be published. Required fields are marked *