ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ಒಟ್ಟು 120ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಮಾಡಿರುವ ಆರೋಗ್ಯ ಇಲಾಖೆ, ಅವರ ಕ್ಲಿನಿಕ್‌ಗಳನ್ನು ಬಂದ್ ಮಾಡಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಆರ್ಎಂಪಿ ವೈದ್ಯರ ವಿರುದ್ಧ ಎಂಎಲ್ಸಿ ಶರಣಗೌಡ ಬಯ್ಯಾಪುರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೆ ಈ ಕಾರ್ಯಾಚರಣೆ ನಡೆದಿದೆ.
ಚಿಕಿತ್ಸೆ ಆರಂಭದಲ್ಲೇ ಆರ್ಎಂಪಿ ನಕಲಿ ವೈದ್ಯರು ಹೈ ಡೋಸ್ ಚಿಕಿತ್ಸೆ ಕೊಡುತ್ತಾರೆ. ಹೀಗಾಗಿ ನಕಲಿ ವೈದ್ಯರ ಬಳಿ ಬರುವವರು ಕಡಿಮೆ ಅವಧಿಯಲ್ಲೇ ಗುಣ ಮುಖರಾಗುತ್ತಾರೆ. ರೋಗಿಗಳ ದೀರ್ಘಕಾಲದ ಸ್ಥಿತಿಗತಿ ಬಗ್ಗೆ ಆರ್ಎಂಪಿ ವೈದ್ಯರು ತಲೆ ಕೆಡಿಸಿಕೊಳ್ಳುವುದಿಲ್ಲ.
ಅಸಲಿ ವೈದ್ಯರು ಹಂತ ಹಂತವಾಗಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಜನರು ಹೈಡೋಸ್ ಕೊಡುವ ನಕಲಿ ವೈದ್ಯರ ಬಳಿಯೇ ಹೋಗುತ್ತಾರೆ ಎಂದು ಎಂಎಲ್ಸಿ ಶರಣೇಗೌಡ ಬಯ್ಯಾಪುರ ಆತಂಕ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರ ವೀಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ನಿತೀಶ್.ಕೆ ಅವರ ಆದೇಶದನ್ವಯ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಬಿಗ್ ಆಪರೇಶನ್ ಮಾಡಿದೆ.
ಕೆಪಿಎಂಇ ರಿಜಿಸ್ಟ್ರೇಷನ್ ಇಲ್ಲದೆ ಅಲೋಪತಿ ಚಿಕಿತ್ಸೆ ನೀಡುತ್ತಿರುವ ಆಯುಷ್ ವೈದ್ಯರಿಗೂ ದಂಡ ವಿಧಿಸಲಾಗಿದೆ. ಹೀಗೆ ನಿಯಮ ಉಲ್ಲಂಘಿಸಿದ್ದ 17 ಜನರಿಗೆ 25 ರಿಂದ 50 ಸಾವಿರ ರೂ. ದಂಡ ವಿಧಿಸಲಾಗಿದೆ. ನಕಲಿ ವೈದ್ಯರಿಗೆ ಕಾನೂನು ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ಡಿಎಚ್ಒ ಡಾ.ಸುರೇಂದ್ರಬಾಬು ಹೇಳಿದ್ದಾರೆ.
ಬಾಯ್‌ಫ್ರೆಂಡ್ ಜತೆ ಮೊಮ್ಮಗಳ ನೋಡಿದ ಅಜ್ಜಿಯ ಕೊಲೆ
ಬಾಯ್‌ಫ್ರೆಂಡ್ ಜತೆ ಸೆಕ್ಸ್‌ನಲ್ಲಿದ್ದ ಮೊಮ್ಮಗಳು ಅಜ್ಜಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಮೊಮ್ಮಗಳು ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜಲೌನ್ನಲ್ಲಿ ನಡೆದಿದೆ. 75 ವರ್ಷದ ಅಜ್ಜಿಯ ಕೊಲೆ ಮಾಡಿರುವ ಯುವತಿಯನ್ನು ಬಂಧಿಸಲಾಗಿದೆ. ಆಕೆಯ ಬಾಯ್‌ಫ್ರೆಂಡ್ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ಯುವತಿ ತಡರಾತ್ರಿ ಗೆಳೆಯ ದೀಪಕ್ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಅಜ್ಜಿ ಕೋಣೆಗೆ ಪ್ರವೇಶಿಸಿದಾಗ ಇಬ್ಬರೂ ಹಾಸಿಗೆಯ ಮೇಲೆ ಒಟ್ಟಿಗೆ ಇರುವುದನ್ನು ನೋಡಿದ್ದಾರೆ. ಅಜ್ಜಿ ತನ್ನ ಸಂಬಂಧವನ್ನು ಬಹಿರಂಗಪಡಿಸುತ್ತಾಳೆ ಎಂಬ ಭಯದಿಂದ ಪಲ್ಲವಿ ಗಾಬರಿಯಾಗಿ ದೀಪಕ್ ಜತೆ ಸೇರಿ ಅಜ್ಜಿಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಸಾಯಿಸಿದ್ದಾಳೆ.
ವಿಷಯ ಗೊತ್ತಾಗದಿರಲೆಂದು ಕಳ್ಳ ಕಳ್ಳ ಎಂದು ಯುವತಿ ಕಿರುಚಿದ್ದಳು. ನಂತರ ಆಕೆಯ ತಂದೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ ತನಿಖೆಯ ಸಮಯದಲ್ಲಿ ಸತ್ಯ ಹೊರ ಬಂದಿದ್ದು, ಆರೋಪಿ ಯುವತಿ ಪಲ್ಲವಿಯನ್ನು ಬಂಧಿಸಲಾಗಿದ್ದು, ಗೆಳೆಯ ದೀಪಕ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.