ಆರ್‌ಬಿಐ ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆ ಮಾಡುವ ಡಿಜಿ ರುಪಿ ಎಂಬ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದು ಇಂಟರ್ನೆಟ್ ಇಲ್ಲದೆ ಡಿಜಿ ರೂಪಿ ಹಣ ವರ್ಗಾವಣೆ ಮಾಡಲು ಸಹಕಾರಿಯಾಗಲಿದೆ.ಇದು ದೇಶದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು. ಇಂಟರ್ನೆಟ್ ಅಥವಾ ದೂರವಾಣಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಈ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಬಹಳಷ್ಟು ನೆರವಾಗಲಿದೆ.
ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯೊಂದಿಗೆ ಇತ್ತೀಚಿಗೆ ಮುಂಬೈನಲ್ಲಿ ನಡೆದ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಡಿಜಿ ರುಪಾಯಿ ವ್ಯವಸ್ಥೆ ಘೋಷಣೆಯಾಗಿದೆ. ಡಿಜಿ ರೂಪಾಯಿ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ ಕರೆನ್ಸಿ ಆಗಿದೆ. ಭೌತಿಕ ಹಣದ ಡಿಜಿಟಲ್ ರೂಪ ಇದಾಗಿದೆ. ಭೌತಿಕ ಹಣಕ್ಕೆ ಇರುವ ಮೌಲ್ಯ ಈ ಡಿಜಿಟಲ್ ರೂಪಾಯಿಗೆ ಇರಲಿದೆ. ಈ ಹಣ ಬ್ಯಾಂಕುಗಳ ವ್ಯಾಲೆಟ್ ನಲ್ಲಿ ಇರಲಿದೆ.
ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಇದು ಯುಪಿಐ ವಿಧಾನಕ್ಕಿಂತ ವಿಭಿನ್ನವಾಗಿ ಕೆಲಸ ನಿರ್ವಹಿಸುತ್ತದೆ. ಈ ಡಿಜಿಟಲ್ ರೂಪಾಯಿಯು ಟೆಲಿಕಾಂ ನೆರವಿನ ಆಫ್ಲೈನ್ ಪೇಮೆಂಟ್ ಮತ್ತು ಎನ್‌ಎಫ್‌ಸಿ ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಟೆಲಿಕಾಂ ನೆರವಿನ ಪೇಮೆಂಟ್ ವ್ಯವಸ್ಥೆಗೆ ಕನಿಷ್ಠ ನೆಟ್ವರ್ಕ್ ಸಿಗ್ನಲ್ ಇದ್ದರೆ ಕಾರ್ಯನಿರ್ವಹಿಸುತ್ತದೆ. ಎನ್ ಎಫ್ ಸಿ ವ್ಯವಸ್ಥೆಯು ಇಂಟರ್ನೆಟ್ ಹಾಗೂ ಟೆಲಿಕಾಂ ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ.
ಮೊಬೈಲನ್ನು ಟ್ಯಾಪ್ ಮಾಡುವ ಮೂಲಕ ಹಣ ವರ್ಗಾವಣೆಯಾಗುತ್ತದೆ. ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳ ಹೆಸರುಗಳೊಂದಿಗೆ ಆಪ್ ಗಳು ಲಭ್ಯವಿದ್ದು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾಯಿಸುವವರು ಆಪ್ ಮೂಲಕ ವ್ಯಾಲೆಟ್ ಗಳನ್ನು ಬಳಸಬಹುದು. ಈ ಡಿಜಿಟಲ್ ರುಪಿ ನೆಟ್ವರ್ಕ್ ಸಮಸ್ಯೆಗಳಿಂದ ಆಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ.


