Menu

ಶಾಸಕರು ಲೋಕಾಯುಕ್ತಕ್ಕೆ ಜೂ.30ರೊಳಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ

vidanasouda

ಬೆಂಗಳೂರು: ಶಾಸಕರು ಹಾಗೂ ಅವರ  ಕುಟುಂಬದ ಸದಸ್ಯರ ಆಸ್ತಿ ವಿವರದ ಪಟ್ಟಿಯನ್ನು ಜೂನ್ 30ರೊಳಗೆ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ.

16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು 2024-25ನೇ ಸಾಲಿಗೆ ಸಂಬಂಧಿಸಿದ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಲೋಕಾಯುಕ್ತರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.

ಲೋಕಾಯುಕ್ತರಿಗೆ ಆಸ್ತಿವಿವರವನ್ನು ಶಾಸಕರು ನೇರವಾಗಿ ಸಲ್ಲಿಸಿ ಅದರ ಮಾಹಿತಿಯನ್ನು ಸಚಿವಾಲಯಕ್ಕೆ ನೀಡುವಂತೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಈ ಸಂಬಂಧ ಲೋಕಾಯುಕ್ತ ನಿಬಂಧಕರು ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಕಲಂ 7 ರ ಉಪಕಲಂ (1ರಡಿ) ಉಲ್ಲೇಖಿಸಿರುವಂತೆ ಪ್ರತಿಯೊಬ್ಬ ವಿಧಾನಸಭೆಯ ಸದಸ್ಯರು ಆಯಾ ವರ್ಷದ ಜೂ.30ರೊಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವದ ಪಟ್ಟಿಯನ್ನು ನಿಗದಿಪಡಿಸಲಾದ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕಾಗಿದೆ. ಇದೇ ಕಾನೂನು ವಿಧಾನಪರಿಷತ್ ಸದಸ್ಯರಿಗೂ ಅನ್ವಯವಾಗಲಿದೆ

Related Posts

Leave a Reply

Your email address will not be published. Required fields are marked *