Menu

ಪಾಕ್‌ಗೆ ಕ್ಷಿಪಣಿ ನೆರವು: ವಿಜಯಪುರ ರೈತರಿಂದ ಟರ್ಕಿ ಬೈಕಾಟ್‌ ಅಭಿಯಾನ

ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನ‌ಕ್ಕೆ ಕ್ಷಿಪಣಿ ಪೂರೈಸಿ ನೆರವು ನೀಡಿರುವ ಟರ್ಕಿ ವಿರುದ್ಧ ವಿಜಯಪುರದಲ್ಲಿ ಬೈಕಾಟ್ ಟರ್ಕಿ ಅಭಿಯಾನ ನಡೆಯುತ್ತಿದೆ.

ಅರ್ಕಿಗೆ ಕೃಷಿ ಉತ್ಪನ್ನ ರಪ್ತು ನಿಷೇಧ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ರೈತರು ಮುದಾಗಿ, ಜಿಲ್ಲೆಯಿಂದ ಹಣ್ಣು ಮತ್ತು ಇತರ ಉತ್ಪನ್ನಗಳನ್ನ ಟರ್ಕಿ ದೇಶಕ್ಕೆ ರಪ್ತು ಮಾಡದಿರಲು ನಿರ್ಧರಿಸಿದ್ದಾರೆ.

ಗುಣಮಟ್ಟದ ಹಣ್ಣುಗಳನ್ನ ಟರ್ಕಿ ಸೇರಿ ಪಾಕಿಸ್ತಾನ, ಚೀನಾಗೆ ರಪ್ತು ಮಾಡುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ವಿಜಯಪುರ ಜಿಲ್ಲೆಯಿಂದ ವಿದೇಶಕ್ಕೆ ರಪ್ತಾಗುವ ಗುಣಮಟ್ಟದ ಮಾವು, ದಾಳಿಂಬೆ, ನಿಂಬೆ ಹಾಗೂ ಟೊಮೆಟೊ ರಫ್ತು ಸ್ಥಗಿತಗೊಳಿಸುತ್ತಿದ್ದಾರೆ. ಜುಮನಾಳ ಗ್ರಾಮದಲ್ಲಿ ಬೆಳೆದು ವಿದೇಶಕ್ಕೆ ಕಳುಹಿಸಲಾಗುವ ಮಾವು ರಫ್ತು ಕೂಡ ನಿಲ್ಲಿಸುತ್ತಿ ದ್ದಾರೆ.

ಭಾರತ ದೇಶದ ಮಿತ್ರ ರಾಷ್ಟ್ರಗಳಿಗೆ ಮತ್ತು ನಮ್ಮ ಸೈನಿಕರಿಗೆ ಹಣ್ಣುಗಳನ್ನ ಕಳುಹಿಸುತ್ತೇವೆ, ಪಾಕ್, ಟರ್ಕಿ, ಚೀನಾಗೆ ಕಳಿಸುವುದಿಲ್ಲ ಎನ್ನುತ್ತಿದ್ದಾರೆ ವಿಜಯಪುರ ರೈತರು.

Related Posts

Leave a Reply

Your email address will not be published. Required fields are marked *