ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮೈಸೂರಿನ ನಾಗಶ್ರೀ ಮತ್ತು ಕಿಶೋರ್ ದಂಪತಿಯ ಪುತ್ರಿ ಕೀರ್ತನಾ ಅವರಿಗೆ ಸಿಎಸ್‌ಆರ್ ನಿಧಿಯಿಂದ ನೆರವು ಕಲ್ಪಿಸುವ ಸಂಬಂಧ ಕಾರ್ಪೋರೇಟ್ ಸಂಸ್ಥೆ ಗಳಿಗೆ ಪತ್ರದ ಮೂಲಕ ಮನವಿ ಮಾಡಲು ಸಚಿವ ಜಮೀರ್ ಅಹಮದ್ ಖಾನ್ ಮುಂದಾಗಿದ್ದಾರೆ.
ಕೀರ್ತನಾ ಚಿಕಿತ್ಸೆಗೆ 16 ಕೋಟಿ ರೂ. ಅಗತ್ಯವಿದ್ದು ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ನೆರವು ನೀಡಿದ್ದು ಹೆಚ್ಚಿನ ನೆರವಿಗೆ ಕಾರ್ಪೂರೇಟ್ ಕಂಪನಿಗಳ ಮುಖ್ಯಸ್ಥ ರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಇಂಡಿಯಾ ಬಿಲ್ಡರ್ಸ್ ಮಾಲೀಕ ಜಿಯಾವುಲ್ಲಾ ಷರೀಫ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಸಚಿವರ ಮನವಿಗೆ ಸ್ಪಂದಿಸಿದ ಅವರು ಆದಷ್ಟು ನೆರವಿನ ಭರವಸೆ ನೀಡಿದ್ದಾರೆ.