Menu

ಅಬಕಾರಿ ಅಕ್ರಮದಲ್ಲಿ ಹೆಸರು ದುರ್ಬಳಕೆ: ಕಾನೂನು ಕ್ರಮದ ಎಚ್ಚರಿಕೆಯಿತ್ತ ಸಚಿವ ತಿಮ್ಮಾಪೂರ

RB Timmapura

ಯಾವನೋ ಒಬ್ಬ ಆಡಿಯೋ ದುರುಪಯೋಗ ಮಾಡಿಕೊಂಡು ನನ್ನ ಹಾಗೂ ನನ್ನ ಮಗನ ಹೆಸರನ್ನು ಹೇಳುತ್ತಿದ್ದಾನೆ. ಕೆಲ ಅಧಿಕಾರಿಗಳ ಹೆಸರನ್ನು ತೆಗೆದುಕೊಂಡಿದ್ದಾನೆ. ಅವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಡಿಸಿ ಸುಪರಿಂಡೆಂಟ್ ಒಬ್ಬ ಕಾನ್ಸ್ಟೇಬಲ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅವರನ್ನು ಈಗಾಗಲೇ ಅರೆಸ್ಟ್ ಕೂಡ ಮಾಡಿದ್ದಾರೆ. ನಂತರ ನಾವು ಅವರನ್ನು ನಾವು ಸಸ್ಪೆಂಡ್ ಮಾಡಿದ್ದೇವೆ ಎಂದರು.

ರೆವೆನ್ಯು ಡಿಸಿ, ಜಾಯಿಂಟ್ ಕಮಿಷನರ್, ಸೂಪರಿಂ ಡೆಂಟ್ ಗಳಿಗೆ ಲಾಗಿನ್ ನಲ್ಲಿ ಬರಬಾರದು ಎಂದು ನಾನು ತೆಗೆದು ಹಾಕಿದ್ದೇನೆ‌. ಯಾವನಿಗೆ ಲಾಗಿನ್ ಬರೋದಿಲ್ಲ ಅವನ ಆಡಿಯೋ ಇದು. ಅವನಿಗೆ ಈ ಫೈಲ್ ಗಳಿಗೆ ಏನು ಸಂಬಂಧ.  ಅವನು ಚೀಟ್ ಮಾಡಿ ಹಣ ಗಳಿಸಲಿಕ್ಕೆ ನಮ್ಮಂತವರ ಹೆಸರನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸುಳ್ಳು ಸುದ್ದಿ ಯಾರು ಹಬ್ಬಿಸುತ್ತಾರೆ ಯಾರು ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.  ನನ್ನ ವಿರುದ್ಧ ಇವತ್ತು ಏನು ಈ ಷಡ್ಯಂತ್ರ ನಡೆಯುತ್ತಿದೆ ಇದರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಅಬಕಾರಿ ಇಲಾಖೆ ಅಕ್ರಮ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಅವರು ವರದಿ ಕೇಳಿದ್ದಾರಾ ಎಂಬ ಪ್ರಶ್ನೆ ಉತ್ತರಿಸಿದ ಅವರು, ನನ್ನಿಂದ ಏನು ತಪ್ಪೇ ಆಗದೆ  ಇರುವುದರಿಂದ ಸಿಎಂ ಅವರು ಇದುವರೆಗೂ ನನ್ನನ್ನ ಏನು ಕೇಳಿಲ್ಲ. ಅವರಿಗೆ ಅವರದ್ದೇ ಆದ ಇನ್ಫಾರ್ಮೇಷನ್ ಇರುತ್ತದೆ. ಇದೆಲ್ಲ ಸುಳ್ಳು ಎನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ನನಗೆ ಏನು ಕೇಳಿಲ್ಲ ಎಂದು  ಉತ್ತರಿಸಿದರು.

ಲಕ್ಷ್ಮಿನಾರಾಯಣ ಅವರು ನಿಮ್ಮ  ವಿರುದ್ದ ದೂರು ನೀಡಿದ್ದಾರಲ್ಲ ಎಂದಾಗ, ಅದೇ ಆಡಿಯೋ ಇಟ್ಕೊಂಡು ಲೋಕಾಯುಕ್ತಕ್ಕೆ ಕೊಟ್ಟಿದ್ದಾರೆ. ಅದರಲ್ಲಿ ಏನು ಹೊಸದಿಲ್ಲ. ನಾನು ಯಾವಾಗ ಅಬಕಾರಿ ಖಾತೆ ಸಚಿವನಾಗಿದ್ದೇನೆ ಅವಾಗ ನಿಂದಲೂ ಕೂಡ ಇದು ಶುರುವಾಗಿದೆ. ನಾನು ಇಲಾಖೆಯಲ್ಲಿ ಎಷ್ಟೋ ಸುಧಾರಣೆಗಳು ತಂದಿದ್ದೇನೆ. ಯಾರು ತರದ ಸುಧಾರಣೆಗಳನ್ನು ತಂದಿದ್ದೇನೆ. ಒಂದೊಂದು ವರ್ಷಕ್ಕೆ ಲೈಸನ್ಸ್ ರಿನವಲ್ ಆಗೋದನ್ನು 5 ವರ್ಷಕ್ಕೊಮ್ಮೆ ಮಾಡಿದ್ದೇನೆ‌. ಆಡಳಿತ ಸುಧಾರಣಾ ಸಮಿತಿಯವರು ಏನೇನು ಶಿಫಾರಸ್ಸು ಮಾಡಿದಾರೆ. ಎಲ್ಲವನ್ನು ಕೂಡ ನಾನು ತರುತ್ತಿದ್ದೇನೆ ಎಂದು ತಿಮ್ಮಾಪೂರ ಹೇಳಿದರು.

Related Posts

Leave a Reply

Your email address will not be published. Required fields are marked *