Menu

ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು 8ನೇ ಬಾರಿಯ ಬಜೆಟ್‌ ಮಂಡನೆ

ಇಂದು (ಫೆ.1) ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಂಟನೇ ಬಾರಿ ಬಜೆಟ್‌ ಮಂಡಿಸಲಿದ್ದಾರೆ. ಸಚಿವೆ ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ. ಈ ಬಾರಿ ಅವರು ಕೆನೆಬಣ್ಣದ ಮಧುಬನಿ ಸೀರೆಯುಟ್ಟು ಗಮನ ಸೆಳೆದಿದ್ದಾರೆ.

ಬಜೆಟ್ ಮಂಡಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮತಿ ಪಡೆದಿದ್ದಾರೆ. ಇದೀಗ ಸಂಪುಟ ಸಭೆ ನಡೆಯಲಿದ್ದು, ಬಜೆಟ್​ಗೆ ಅನುಮೋದನೆ ದೊರೆಯಲಿದೆ.

2019, 2020, 2021, 2022, 2023, 2024 (ಮಧ್ಯಂತರ ಬಜೆಟ್)‌, 2024 (ಪೂರ್ಣ ಬಜೆಟ್)‌ ಅವಧಿಯಲ್ಲಿ ಬಜೆಟ್‌ ಮಂಡಿಸಿದ ಹೆಗ್ಗಳಿಕೆ ನಿರ್ಮಲಾ ಸೀತಾರಾಮನ್‌ ಅವರದು.

ಈ ಬಾರಿ ಬಜೆಟ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3ರಿಂದ 5 ಲಕ್ಷ ಹೆಚ್ಚಿಸಬಹುದು, ಕೃಷಿ ಮೂಲ ಸೌಕರ್ಯ ದಲ್ಲಿನ ಹೂಡಿಕೆಗಳಿಗೆ ಆದ್ಯತೆ ಸಿಗಬಹುದು. ಮಧ್ಯಮವರ್ಗಕ್ಕೆ ಅನುಕೂಲವಾಗುವಂತೆ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

Related Posts

Leave a Reply

Your email address will not be published. Required fields are marked *