Menu

ಭೂಕಬಳಿಕೆದಾರರ ವಿರುದ್ಧ ಎಫ್ ಐಆರ್ ದಾಖಲಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

krishna byregowda

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಭೂಕಬಳಿಕೆದಾರರ ವಿರುದ್ಧ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರು ನಗರ ವ್ಯಾಪ್ತಿ ಸರ್ಕಾರಿ ಜಮೀನು ಒತ್ತುವರಿ ತೆರವು ಸಂಬಂಧಿಸಿ ಮಂಗಳವಾರ ಕಂದಾಯ ಆಯುಕ್ತರು ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ತಹಶೀಲ್ದಾರ್ – ಎಸಿ ಗಳ ಜೊತೆಗೆ ನಡೆದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Land beat ಆ್ಯಪ್ ನಲ್ಲಿ ಶೇ.97 ರಷ್ಟು ಸರ್ಕಾರಿ ಭೂಮಿಯನ್ನು ಗುರುತಿಸಿ ಡೇಟಾ ಎಂಟ್ರಿ ಮಾಡಲಾಗಿದೆ. ಈ ಅಂಕಿ ಅಂಶ ಉಪಯೋಗಿಸಿಕೊಂಡು ground truthing ಮಾಡಿ ದಿಶಾಂಕ್ ಆ್ಯಪ್ ನಲ್ಲಿ ಅಪ್ಡೇಟ್ ಮಾಡಬೇಕು. ಇದರ ಆಧಾರದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.

ಅನುಮತಿ ನೀಡಿದ ಪ್ರದೇಶಕ್ಕೂ ಮೀರಿ ಅನದೀಕೃತ ಲೇಔಟ್ ಮಾಡಿದವರ ವಿರುದ್ಧ FIR ಮಾಡಬೇಕು. ಅಕ್ರಮ ಲೇಔಟ್ ನಿರ್ಮಿಸಿದ ಎಲ್ಲರ ವಿರುದ್ಧವೂ FIR ದಾಖಲಿಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಗೋಮಾಳಗಳಲ್ಲಿ ಮಾಡಿರುವ illogical layout ಗಳ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಪ್ರಶ್ನಿಸಿದ ಸಚಿವ ಕೃಷ್ಣ ಭೈರೇಗೌಡ, ಎಷ್ಟು illegal Layouts ಗಳನ್ನ Demolish ಮಾಡಿದಿರ? ಎಷ್ಟು ಜನರ ಮೇಲೆ FIR ಮಾಡಿದೀರ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Grant ಜಮೀನು ಮೀರಿ layout ಮಾಡಿದ್ದರೆ ಅಂತವರ ವಿರುದ್ಧ FIR ದಾಖಲಿಸಬೇಕು. ನಕಲಿ ದಾಖಲೆಪತ್ರ ಮಾಡಿರುವವ ವಿರುದ್ಧ ಕ್ರಮ ಜರುಗಿಸಬೇಕು. ನಕಾಶೆ ರಸ್ತೆ ಎಷ್ಟು ಒತ್ತುವರಿ ಆಗಿದೆ ಎಂಬ ಕುರಿತು ಮೊದಲು ಮಾಹಿತಿ ಸಂಗ್ರಹಿಸಲು ಸೂಚಿಸಿದರು.

ಬೆಂಗಳೂರಲ್ಲಿ ದಿನನಿತ್ಯ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಅಧಿಕಾರಿಗಳು ಏನ್ ಮಾಡ್ತಾ ಇದೀರ? ಕಾನೂನು ಉಲ್ಲಂಘಿಸಿ ಲೇಔಟ್ ಮಾಡುವವರಿಗೆ ಕರುಣೆ ತೋರಿಸುವ ಅಗತ್ಯ ಇಲ್ಲ. ಪ್ರತಿಯೊಂದು ಖಾಲಿ ಸರ್ಕಾರಿ ಜಮೀನಿಗೆ ಬೇಲಿ-ಕಾಂಪೌಂಡ್ ಹಾಕಲೇಬೇಕು. ಮತ್ತೆ ಒತ್ತುವರಿ ಆದರೆ ತಹಶೀಲ್ದಾರ್ ಅವರೇ ಜವಾಬ್ದಾರಿ ಎಂದು ಅವರು ಎಚ್ಚರಿಸಿದರು.

Related Posts

Leave a Reply

Your email address will not be published. Required fields are marked *