Menu

ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ, ಡಸೆಲ್ಡಾರ್ಫ್‌ಗೆ ಭೇಟಿ, ಕೌಶಲ್ಯ ವಿನಿಯಮ ಒಪ್ಪಂದ

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ನೇತೃತ್ವದ ನಿಯೋಗ ಜರ್ಮನಿ ಪ್ರವಾಸ ಕೈಗೊಂಡಿದೆ.  ನಿಯೋಗವು, ಜರ್ಮನಿಯ ನಾರ್ತ್ ರೈನ್-ವೆಸ್ಟ್‌ಫಾಲಿಯಾ (ಎನ್‌ಆರ್‌ಡಬ್ಲ್ಯೂ), ಡಸೆಲ್ಡಾರ್ಫ್‌ ಸೇರಿದಂತೆ ಜರ್ಮನಿಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ, ಉದ್ಯೋಗವಾಕಾಶ ಸೇರಿದಂತೆ ಹಲವಾರು ವಿಷಯಗಳ ಕುರಿತು  ಸಮಾಲೋಚನೆ ನಡೆಸಲಿದೆ.

ಯಾಂತ್ರೀಕೃತ ಕೈಗಾರಿಕೆ,ಮೆಕಾಟ್ರಾನಿಕ್ಸ್ ಮತ್ತು ಸ್ಮಾರ್ಟ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಅಪ್ರೆಂಟಿಸ್‌ಶಿಪ್, ಕೌಶಲ್ಯ ಸಹಯೋಗದ ಕುರಿತು ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನೇತೃತ್ವದ ನಿಯೋಗ ಅಧ್ಯಯನ ನಡೆಸಿ ಕೆಲವು ಮಹತ್ವದ ಒಪ್ಪಂದ ಕೂಡ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರಿನ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್ ಕುಮಾರ್  ಮತ್ತು ಹಿರಿಯ ಅಧಿಕಾರಿಗಳ ನಿಯೋಗ ಡಸೆಲ್ಡಾರ್ಫ್‌ನಲ್ಲಿ ಜರ್ಮನ್ ನರ್ಸಿಂಗ್‌ ಅಪ್ರೆಂಟಿಶಿಪ್‌, ಕರ್ನಾಟಕ ಮತ್ತು ಎನ್‌ಆರ್‌ಡಬ್ಲ್ಯೂ ನಡುವೆ ರಚನಾತ್ಮಕ ಕೌಶಲ್ಯ ವಲಸೆ ಮಾರ್ಗವನ್ನು ರೂಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದೆ. ಜಿಟಿಟಿಸಿಯ ತಾಂತ್ರಿಕ ಪಠ್ಯಕ್ರಮವನ್ನು ಜರ್ಮನ್ ತರಬೇತಿ ಮಾನದಂಡಗಳೊಂದಿಗೆ ಅಳವಡಿಸಿಕೊಳ್ಳುವ ಮತ್ತು ಕರ್ನಾಟಕದ ಯುವಕರಿಗೆ ರಚನಾತ್ಮಕ ಪೂರ್ವ-ನಿರ್ಗಮನ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದರು.

ಕರ್ನಾಟಕದ ತರಬೇತಿ ಪಡೆದ ನರ್ಸಿಂಗ್ ವೃತ್ತಿಪರರಿಗೆ ಪ್ಫ್ಲೆಜ್ ಆಸ್‌ಬಿಲ್ಡಂಗ್ (ನರ್ಸಿಂಗ್ ಅಪ್ರೆಂಟಿಸ್‌ಶಿಪ್‌ಗಳು) ಮತ್ತು ನೈತಿಕ ವಲಸೆ ಚೌಕಟ್ಟುಗಳಿಗೆ ಮಾರ್ಗಗಳನ್ನು ಅನ್ವೇಷಿಸಲು ಸಚಿವರು ಆರೋಗ್ಯ ಕ್ಷೇತ್ರದ ಪ್ರತಿನಿಧಿಗಳನ್ನು ಸಹ ಭೇಟಿಯಾದರು. ಕರ್ನಾಟಕ ಮತ್ತು ನಾರ್ತ್ ರೈನ್-ವೆಸ್ಟ್‌ಫಾಲಿಯಾ ನಡುವೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಕೌಶಲ್ಯ ಪಾಲುದಾರಿಕೆ, ಕರ್ನಾಟಕದ ಸಾವಿರಾರು ಯುವಕರು ಜರ್ಮನಿಯಲ್ಲಿ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಕುರಿತು ಡಾ.‌ ಪಾಟೀಲ್‌ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

Related Posts

Leave a Reply

Your email address will not be published. Required fields are marked *