ಐಟಿ ದಿಗ್ಗಜ ಮೈಕ್ರೊಸಾಫ್ಟ್ ಸಂಸ್ಥೆ ಶೇ.4ರಷ್ಟು ಅಂದರೆ 9100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು 2023ರ ನಂತರ ನಡೆದ ದೊಡ್ಡ ಉದ್ಯೋಗ ಕಡಿತವಾಗಿದೆ.
ಈ ಸಂಸ್ಥೆಯಲ್ಲಿ 2024 ಜೂನ್ ವೇಳೆಗೆ ಜಗತ್ತಿನಾದ್ಯಂತ 2,28,000 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತ ಬದುಕು ಕಟ್ಟಿಕೊಂಡಿದ್ದರು. ಈಗ ಈ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದೆ. ಈ ಬಗ್ಗೆ ಮೈಕ್ರೊಸಾಫ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೂಮ್ ಬರ್ಗ್ ನ್ಯೂಸ್ ವರದಿ ಪ್ರಕಾರ ಅತಿ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭಿಸಿದೆ. ಕಳೆದ ಮೇ ತಿಂಗಳಲ್ಲಿ 6000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೊಸಾಫ್ಟ್ ಇದೀಗ 9100 ಉದ್ಯೋಗಿಗಳನ್ನು ವಜಾಗೊಳಿಸಿದೆ.
2025 ರಲ್ಲಿ ಇಲ್ಲಿಯವರೆಗೆ 100,000 ಕ್ಕೂ ಹೆಚ್ಚು ತಾಂತ್ರಿಕ ಉದ್ಯೋಗಗಳು ಕಳೆದುಹೋಗಿವೆ, ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಗೂಗಲ್‌ನಂತಹ ಪ್ರಮುಖ ಕಂಪನಿಗಳು ವೆಚ್ಚದ ಒತ್ತಡ, ಪುನರ್ರಚನೆ ಮತ್ತು AIಅಳವಡಿಕೆ ಕಾರಣ ಈ ಕ್ರಮಕ್ಕೆ ಮುಂದಾಗಿದೆ.