ಮೈಕ್ರೊ ಫೈನಾನ್ಸ್ ಹಾವಳಿ ತಡೆಯಲು ಹೊರಡಿಸಲಾಗಿದ್ದ ಸುಗ್ರಿವಾಜ್ಞೆಯನ್ನು ರಾಜ್ಯ ಸರ್ಕಾರ ಮತ್ತೆ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಟ್ಟಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಕೆಲವು ಸ್ಪಷ್ಟೀಕರಣ ಕೇಳಿ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಯನ್ನು ವಾಪಸ್ ಕಳುಹಿಸಿದ್ದರು. ಇದೀಗ ರಾಜ್ಯಪಾಲರು ಕೇಳಿದ ಎಲ್ಲಾ ಅನುಮಾನಗಳಿಗೆ ಸೂಕ್ತ ಉತ್ತರದೊಂದಿಗೆ ಮರಳಿ ಕಳುಹಿಸಿಕೊಡಲಾಗಿದೆ.
೧೦ ವರ್ಷದ ಶಿಕ್ಷೆಯ ಪ್ರಮಾಣ, ಸಾಲಗಾರರ ದಾಖಲೆ ಪಡೆಯದೇ ಸಾಲ ನೀಡುವ ಬಗ್ಗೆ ಸೇರಿದಂತೆ ಹಲವು ಟಿಪ್ಪಣಿಗಳನ್ನು ನೀಡಿ ಸದನದಲ್ಲಿ ಚರ್ಚೆ ಮಾಡಿ ಮರು ಮಂಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು.
ರಾಜ್ಯಪಾಲರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿರುವ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಅನುಮೋದನೆಗೆ ಮತ್ತೆ ಕಳುಹಿಸಿಕೊಟ್ಟಿದೆ.