Menu

ಸ್ವಾತಂತ್ರ್ಯ ದಿನಾಚರಣೆಗೆ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ

namma metro

ಬೆಂಗಳೂರು: ಆಗಸ್ಟ್ 15ರ ಒಳಗೆ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಯೆಲ್ಲೊ ಲೈನ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಎರಡು ಮನವಿ ಬಂದಿದೆ. ಯೆಲ್ಲೋ ಲೈನ್ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಸೇಫ್ಟಿ ಟೆಸ್ಟ್ ಏಜೆನ್ಸಿ ಇದೆ. ಅವರು ಎಲ್ಲಾ ಚೆಕ್ ಮಾಡ್ತಾರೆ. ಮುಂದಿನ ವಾರದ ಒಳಗೆ ಸೇಫ್ಟಿ ಅಸೆಸ್ಮೆಂಟ್ ಟೆಸ್ಟ್ ಮುಗಿಯಬಹುದು. 17 ಕಿ.ಮೀನಲ್ಲಿ 17 ಸ್ಟೇಷನ್ ಇದೆ. ನಾವು ಸರ್ಕಾರದ ಮುಂದೆ ಹೋಗ್ತೇವೆ. ಎಲ್ಲಾ ಮಾಡೋದ ಅಥವಾ ಮೂರ್ನಾಲ್ಕು ಸ್ಟೇಷನ್‌ನಲ್ಲಿ ಮಾತ್ರ ಓಡ್ಸೋದಾ ನೋಡ್ತೀವಿ ಎಂದು ಹೇಳಿದ್ದಾರೆ.

ನಾವು ಆಗಸ್ಟ್ ತಿಂಗಳಲ್ಲಿ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಚಾಲನೆ ಕೊಡ್ತೀವಿ. ಜಯನಗರದಲ್ಲಿ ಅಂಡರ್ ಪಾಸ್‌ಗೆ ಮನವಿ ಕೊಟ್ಟಿದ್ದಾರೆ. ಸರ್ಕಾರ ಫಂಡಿಂಗ್ ಕೊಡುತ್ತಾ ಅಥವಾ ಇಲ್ಲವಾ ಅನ್ನುವ ಬಗ್ಗೆ ನೋಡ್ಬೇಕು ಎಂದಿದ್ದಾರೆ.

ಹಳದಿ ಲೈನ್ ಮೆಟ್ರೋ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ವ್ಯಾಪಕ ಟೀಕೆ ಬೆನ್ನಲ್ಲೇ ಬಿಎಂಆರ್‌ಸಿಎಲ್ ಎಂಡಿ ಪ್ರತಿಕ್ರಿಯೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *