ಬೆಳಗಾವಿ ಪೊಲೀಸರನ್ನು ನಾಯಿಗೆ ಹೋಲಿಸಿ ಎಂಇಎಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಉದ್ಧಟತನ ತೋರಿದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ಮುಖಂಡ ಶುಭಂ ಶಳಕೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಇಎಸ್ ಹೀಗೆ ಪ್ರತಿಕ್ರಿಯಿಸಿದೆ.
ಕನ್ನಡ ಪರ ಹೋರಾಟಗಾರರು ಹಾಗೂ ಕರ್ನಾಟಕ ಅಪಹಾಸ್ಯ ಮಾಡಿದ್ದ ಶಳಕೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆತನ ಬಂಧನದ ಬಳಿಕ ಮತ್ತೆ ಎಂಇಎಸ್ ಮತ್ತೆ ಪೋಸ್ಟ್ ಹಾಕಿ ಪುಂಡಾಟ ನಡೆಸಿದೆ.
“ಸಮಿತಿಯ ಸಿಂಹ ಏಕಾಂಗಿಯಾಗಿ ಹೋರಾಡುತ್ತಿದೆ, ಸಾವಿರಾರು ನಾಯಿಗಳು ಸಿಂಹವನ್ನು ಮುಗಿಸಲು ಬೆನ್ನತ್ತಿವೆ. ಆದರೇ ಸಿಂಹವನ್ನು ಮುಗಿಸಲು ನಾಯಿ ಗಳಿಂದ ಸಾಧ್ಯವಾಗುತ್ತಿಲ್ಲ.” ಎಂದು ಯುವ ಸಮಿತಿ ಸೀನಾಬಾಗ್ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಬೆಳಗಾವಿಗೆ ಸಂಬಂಧಿಸಿದಂತೆ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಆಗಾಗ ಸಂಘರ್ಷ ನಡೆಯುತ್ತಿದ್ದು, ಇತ್ತೀಚೆಗೆ ಬಸ್ ನಿರ್ವಾಹಕರೊಬ್ಬರ ಮೇಲೆ ಮರಾಠಿಗರು ನಡೆಸಿದ ಹಲ್ಲೆಯಿಂದ ಅಲ್ಲಿನ ಸನ್ನಿವೇಶ ಗಂಭೀರ ತಿರುವು ಪಡೆದು ಎರಡು ರಾಜ್ಯಗಳ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಕೂಡ ಉಂಟಾಗಿತ್ತು.