Thursday, January 30, 2025
Menu

ಮೆಂಟಲ್ ಹೆಲ್ತ್ ಮ್ಯಾಟರ್ಸ್ ಇದು: ಎಲ್‌ ಅಂಡ್‌ ಟಿ ಅಧ್ಯಕ್ಷರ ವಿರುದ್ಧ ಹರಿ ಹಾಯ್ದ ದೀಪಿಕಾ ಪಡುಕೋಣೆ

ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ನೀಡಿರುವ ಹೇಳಿಕೆಯನ್ನು ನಟಿ ದೀಪಿಕಾ ಪಡುಕೋಣೆ ಖಂಡಿಸಿದ್ದಾರೆ.

ಈ ಹಿಂದೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿ ಇನ್ಫೋಸಿಸ್‌ ನಾರಾಯಣ ಮೂರ್ತಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೋರ್ವ ಉದ್ಯಮಿ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಇದು ದೊಡ್ಡ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಎಂದಿದ್ದಾರೆ ಪಡುಕೋಣೆ.

ಪತ್ರಕರ್ತೆ ಫಾಯೆ ಡಿಸೋಜಾ ಅವರ ಪೋಸ್ಟ್ ಶೇರ್ ಮಾಡಿರುವ ದೀಪಿಕಾ, ಹಿರಿಯ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ. ಇದು ಮೆಂಟಲ್ ಹೆಲ್ತ್ ಮ್ಯಾಟರ್ಸ್ ಎಂದಿದ್ದಾರೆ.

ಎಸ್‌ಎನ್ ಸುಬ್ರಹ್ಮಣ್ಯನ್ ಹೇಳಿಕೆ ಕೆಲಸ-ಜೀವನದ ಸಮತೋಲನ, ಕೆಲಸದ ಸ್ಥಳ ಸಂಸ್ಕೃತಿ, ಒತ್ತಡ ಮತ್ತು ದೊಡ್ಡ ಸಂಸ್ಥೆಗಳಲ್ಲಿ ಉದ್ಯೋಗಿಗಳ ಮೇಲೆ ಇರಿಸಲಾಗಿರುವ ನಿರೀಕ್ಷೆಗಳ ಕುರಿತು ಆನ್‌ಲೈನ್‌ನಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

ದೀಪಿಕಾ ಪಡುಕೋಣೆ ಭಾರತದಲ್ಲಿ ಮಾನಸಿಕ ಆರೋಗ್ಯ ಜಾಗೃತಿಗಾಗಿ ಪ್ರಮುಖ ಸಲಹೆಗಾರರಾಗಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಬೆಂಬಲವನ್ನು ನೀಡಲು ಲೈವ್ ಲವ್ ಲಾಫ್ ಫೌಂಡೇಶನ್ ಅನ್ನು 2015 ರಲ್ಲಿ ಸ್ಥಾಪಿಸಿದ್ದಾರೆ. ಪ್ರತಿಷ್ಠಾನವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ, ಮಾನಸಿಕ ಆರೋಗ್ಯ ಉತ್ತಮಗೊಳಿಸಲು ವೈದ್ಯಕೀಯ ವೃತ್ತಿಪರರಿಗೆ ತರಬೇತಿಯನ್ನು ನೀಡುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಬಗ್ಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆದಿದೆ.

Related Posts

Leave a Reply

Your email address will not be published. Required fields are marked *