Menu

ಬೆಲ್ಜಿಯಂನಲ್ಲಿ ಮೆಹುಲ್ ಚೊಕ್ಸಿ ಅರೆಸ್ಟ್: ಭಾರತದಿಂದ ಗಡಿಪಾರಿಗೆ ಯತ್ನ

mehul choksi

ನವದೆಹಲಿ: ಭಾರತದ ಬ್ಯಾಂಕ್ ಗಳಿಗೆ 12,636 ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಸ್ವಿರ್ಜರ್ಲೆಂಡ್ ಗೆ ಪರಾರಿಯಾಗುವ ಮುನ್ನ ಬೆಲ್ಜಿಯಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಭಾರತ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಮೆಹುಲ್ ಚೊಕ್ಸಿ ಭಾರತಕ್ಕೆ ವಾಪಸ್ ತರಲು ಕೇಂದ್ರ ತನಿಖಾ ಸಂಸ್ಥೆಗಳು ಸತತ 7 ವರ್ಷಗಳ ಪ್ರಯತ್ನದ ನಂತರ ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನಗಳು ನಡೆದಿವೆ. ಸುಮಾರು 3 ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಚೊಕ್ಸಿಯನ್ನು ಕೊನೆಗೂ ಬಂಧಿಸಲಾಗಿದೆ. ಇದೀಗ ಮೆಹುಲ್ ಚೊಕ್ಸಿಯನ್ನು ಗಡಿಪಾರು ಮಾಡಿ ಭಾರತಕ್ಕೆ ರವಾನಿಸುವಂತೆ ಬೆಲ್ಜಿಯಂ ಸರ್ಕಾರವನ್ನು ಕೇಂದ್ರ ಸರ್ಕಾರ ಮನವಿ ಮಾಡಿದೆ.

ಗೀತಾಂಜಲಿ ಗ್ರೂಪ್ಸ್ ಕಂಪನಿ ಮಾಲೀಕ ಮೆಹುಲ್ ಚೊಕ್ಸಿ ಸಂಬಂಧಿ ನೀರವ್ ಮೋದಿ ಜೊತೆಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿದ್ದರು. 2018ರಲ್ಲಿ ಮಹೆಲ್ ಚೊಕ್ಸಿ, ಪತ್ನಿ ಅಮಿ ಮೋದಿ ಮತ್ತು ಸೋದರ ನೀಶಾಲ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಭಾರತ ತ್ಯಜಿಸಿದ ಬೆನ್ನಲ್ಲೇ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಚೊಕ್ಸಿ ಕುಟುಂಬ ಆರಂಭದಲ್ಲಿ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿದ್ದರು.

2021ರಲ್ಲಿ ಡೊಮೆನಿಕಾ ರಿಪಬ್ಲಿಕ್ ನಲ್ಲಿ ಅಕ್ರಮ ವಲಸೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ವೇಳೆ ಸಿಬಿಐ ಡೊಮೆನಿಕಾಗೆ ತೆರಳಿ ಬಂಧಿಸಲು ಮುಂದಾದಾಗ ಅನಾರೋಗ್ಯದ ಕಾರಣವೊಡ್ಡಿದ ಅವರ ಪರ ವಕೀಲರು ಆಂಟಿಗುವಾಕ್ಕೆ ತೆರಳಿದ್ದರು. ವಿಚಾರಣೆ ಮುಗಿದ ಬಳಿಕ ಭಾರತಕ್ಕೆ ಮರಳುವುದಾಗಿ ಹೇಳಿದ್ದರು. ಆದರೆ 51 ದಿನಗಳ ಕಾಲು ಜೈಲುವಾಸ ಅನುಭವಿಸಿದ ನಂತರ ಚೊಕ್ಸಿ ವಿರುದ್ಧದ ಅಕ್ರಮ ವಲಸೆ ಪ್ರಕರಣ ರದ್ದುಗೊಂಡಿತು.

ಕೆಲವು ಸಮಯದ ನಂತರ ಚೊಕ್ಸಿ ಬೆಲ್ಜಿಯಂನಲ್ಲಿ ಅಡಗಿರುವುದು ಭಾರತಕ್ಕೆ ಮಾಹಿತಿ ಲಭ್ಯವಾಗಿದ್ದು, ಬೆಲ್ಜಿಯಂ ಸರ್ಕಾರಕ್ಕೆ ಗಡಿಪಾರು ಮಾಡಲು ಮನವಿ ಮಾಡಲಾಯಿತು. ವಂಚನೆ ಪ್ರಕರಣ ದೃಢಪಡುತ್ತಿದ್ದಂತೆ ಬೆಲ್ಜಿಯಂ ಸರ್ಕಾರ ಗಡಿಪಾರಿಗೆ ಆದೇಶ ಮಾಡಿತು. ಆದರೆ ಗಡಿಪಾರು ಸಮಯ ಹತ್ತಿರ ಬರುತ್ತಿದ್ದಂತೆ ಚೊಕ್ಸಿ ಸ್ವಿಜರ್ಲೆಂಡ್ ಗೆ ಪರಾರಿಯಾಗಲು ಯತ್ನಿಸುತ್ತಿರುವುದು ತಿಳಿದು ಕೂಡಲೇ ಅವರನ್ನು ಬಂಧಿಸಲಾಯಿತು.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಹ ಹಂಚಿಕೊಳ್ಳಲಾಗಿದೆ. ಬೆಲ್ಜಿಯಂ ಪೊಲೀಸರು ಶನಿವಾರ ಚೋಕ್ಸಿಯನ್ನು ಬಂಧಿಸಿದಾಗ ಅವರು ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಚೋಕ್ಸಿ ಅವರ ಪತ್ನಿ ಪ್ರೀತಿ ಬೆಲ್ಜಿಯಂ ಪ್ರಜೆ. ವರದಿಗಳ ಪ್ರಕಾರ, ಚೋಕ್ಸಿ ಬೆಲ್ಜಿಯಂನಲ್ಲಿ ನಿವಾಸ ಕಾರ್ಡ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಅವರು ಭಾರತ ಮತ್ತು ಆಂಟಿಗುವಾದ ನಾಗರಿಕ ಎಂದು ಸಹ ಮರೆಮಾಚಿದ್ದಾರೆ. ಇದಕ್ಕೂ ಮೊದಲು, ಫೆಬ್ರವರಿಯಲ್ಲಿ, ಚೋಕ್ಸಿ ಅವರ ವಕೀಲರು ಮುಂಬೈ ನ್ಯಾಯಾಲಯಕ್ಕೆ ತಿಳಿಸಿದ್ದು, ಅವರು ರಕ್ತ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಲ್ಜಿಯಂನಲ್ಲಿರುವುದರಿಂದ ಅವರು ಭಾರತಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದರು.

ಉದ್ಯಮಿ ಭಾರತೀಯ ಏಜೆನ್ಸಿಗಳೊಂದಿಗೆ ಸಹಕರಿಸಲು ಮತ್ತು ವೀಡಿಯೊ-ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಮುಂದೆ ಹಾಜರಾಗಲು ಸಿದ್ಧರಿದ್ದಾರೆ ಎಂದು ಹೇಳಿದರು, ಆದರೆ ಈ ಸಲಹೆಯನ್ನು ತಿರಸ್ಕರಿಸಲಾಯಿತು ಮತ್ತು ಏಜೆನ್ಸಿಗಳು ಅವರನ್ನು ಹಸ್ತಾಂತರಿಸುವತ್ತ ಕೆಲಸ ಮಾಡುತ್ತಲೇ ಇದ್ದವು. ಈ ಪ್ರಯತ್ನಗಳು ಈಗ ಆತನ ಬಂಧನದಲ್ಲಿ ಕೊನೆಗೊಂಡಿವೆ ಮತ್ತು ಭಾರತೀಯ ಅಧಿಕಾರಿಗಳು ಈಗ ಆತನನ್ನು ವಿಚಾರಣೆಗೆ ಮರಳಿ ಕರೆತರಲು ಕೆಲಸ ಮಾಡುತ್ತಿದ್ದಾರೆ. ಆರೋಗ್ಯದ ಆಧಾರದ ಮೇಲೆ ಉದ್ಯಮಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸುವುದಾಗಿ ಚೋಕ್ಸಿ ಅವರ ವಕೀಲರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *