ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಕಾಣಿಸಿಕೊಂಡಿದ್ದಾನೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಪಿಒಕೆ ಬಳಿಯ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬಹಾವಲ್ಪುರ್ ಭದ್ರಕೋಟೆಯಿಂದ 1,000 ಕಿ.ಮೀ ದೂರದಲ್ಲಿ ಮಸೂದ್ ಅಜರ್ ಕಾಣಿಸಿಕೊಂಡಿದ್ದಾನೆ.
ಅಜರ್ ಇತ್ತೀಚೆಗೆ ಸ್ಕಾರ್ಡುವಿನ ಸದ್ಪರಾ ರಸ್ತೆ ಪ್ರದೇಶದ ಸುತ್ತಲೂ ಓಡಾಟ ನಡೆಸಿರುವುದು ದೃಢಪಟ್ಟಿದೆ. ಈ ಪ್ರದೇಶದಲ್ಲಿ ಕನಿಷ್ಠ ಎರಡು ಮಸೀದಿಗಳು, ಅಂಗಸಂಸ್ಥೆ ಮದರಸಾಗಳು ಮತ್ತು ಹಲವಾರು ಖಾಸಗಿ ಮತ್ತು ಸರ್ಕಾರಿ ಅತಿಥಿ ಗೃಹಗಳನ್ನು ಹೊಂದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಟ್ ಭುಟ್ಟೋ, ಮಸೂದ್ ಆಫ್ಘಾನಿಸ್ತಾನದಲ್ಲಿ ಅಡಗಿಕೊಂಡು ಇರಬೇಕು ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಸೂದ್ ಪಾಕಿಸ್ತಾನದ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಕಾಣಿಸಿಕೊಂಡಿರುವುದು ಆಘಾತ ಮೂಡಿಸಿದೆ.