ರಾಯಚೂರಿನ ಮಸ್ಕಿ ಪುರಸಭೆಯಲ್ಲಿ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ತಪ್ಪಿತಸ್ಥ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕ್ರಮ ಕೈಗೊಂಡು ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪದಡಿ ಅಮಾನತುಗೊಳಿಸಿದ್ದಾರೆ.
ರೆಡ್ಡಿರಾಯನಗೌಡ ಅಮಾನತುಗೊಂಡ ಹಿಂದಿನ ಮಸ್ಕಿ ಪುರಸಭೆ ಮುಖ್ಯ ಅಧಿಕಾರಿ. ಪ್ರಸ್ತುತ ರಾಯಚೂರಿನ ಲಿಂಗಸುಗೂರು ಪುರಸಭೆಯಲ್ಲಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಮಸ್ಕಿ ಪುರಸಭೆಯಲ್ಲಿ ರೆಡ್ಡಿ ರಾಯನಗೌಡ ಮುಖ್ಯ ಅಧಿಕಾರಿಯಾಗಿದ್ದ ವೇಳೆ ಅವ್ಯವಹಾರ ನಡೆಸಿದ್ದು, ಮಸ್ಕಿ ಕಾರ್ಯಾಲಯಕ್ಕೆ 57.64 ಲಕ್ಷ ಪೀಠೋಪಕರಣ ಖರೀದಿಯಲ್ಲಿ ನಡೆದಿದ್ದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆ ಸಮೇತ ಸ್ಥಳೀಯ ನಾಗರಿಕ ದುರ್ಗರಾಜ್ ಹೋರಾಟ ನಡೆಸಿದ್ದರು.