ನ್ಯೂಯಾರ್ಕ್: ವೆನಿಜುವೆಲಾದ ನಾಯಕಿ ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಮರಿಯಾ ಮಚಾಡೋವಾಗೆ 2025ನೇ ಸಾಲಿನ ಪ್ರತಿಷ್ಠಿ ನೋಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನಿರಾಸೆ ಉಂಟಾಗಿದೆ.
ನಾರ್ವೆಯ ನೋಬೆಲ್ ಸಮಿತಿ ಶುಕ್ರವಾರ ವೆನಿಜುವೆಲಾದ ಐರನ್ ಲೇಡಿ ಎಂದೇ ಖ್ಯಾತಿ ಪಡೆದಿರುವ ಆ ದೇಶದ ಪ್ರತಿಪಕ್ಷ ನಾಯಕಿ ಆಗಿರುವ ಮರಿಯಾ ಮಚಾಡೋವಾಗೆ ಅವರನ್ನು 2025ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ವೆನಿಜುವೆಲಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಹಾಗೂ ಹಕ್ಕುಗಳ ವಿರುದ್ಧ ಸತತ ಹೋರಾಟ ನಡೆಸುತ್ತಿರುವ ಮರಿಯಾ ಮಚಡೋವಾ ಅ. 7, 1967 ರಂದು ವೆನಿಜುವೆಲಾದ ಕ್ಯಾರಕಾಸ್ ನಲ್ಲಿ ಜನಿಸಿದ್ದಾರೆ\
ಭಾರತ- ಪಾಕಿಸ್ತಾನ ಸೇರಿದಂತೆ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಈ ಬಾರಿ ನೋಬೆಲ್ ಶಾಂತಿ ಪ್ರಶಸ್ತಿ ನನಗೇ ಬರಬೇಕು ಎಂದು ಹೇಳಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನಿರಾಸೆ ಉಂಟಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಏನೂ ಮಾಡದೇ ಇದ್ದರೂ ನೋಬೆಲ್ ಪ್ರಶಸ್ತಿ ಬಂದಿದೆ. ನಾನು 8 ಯುದ್ಧಗಳನ್ನು ತಪ್ಪಿಸಿದ್ದೇನೆ. ಜಗತ್ತಿನಲ್ಲಿ ಶಾಂತಿ ಕಾಪಾಡಿದ್ದೇನೆ ಎಂದು ಟ್ರಂಪ್ ಹೇಳಿಕೆಗಳನ್ನು ನೀಡಿ ಸುದ್ದಿ ಆಗಿದ್ದರು.