Menu

ವಾರದಲ್ಲೊಮ್ಮೆ ಸೀಬೆ ಎಲೆ ಕಷಾಯದಿಂದ ಹಲವು ಆರೋಗ್ಯ ಲಾಭ

ಸೀಬೆ ಹಣ್ಣಿನಂತೆಯೇ ಸೀಬೆ ಎಲೆಗಳಲ್ಲಿ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ವಿಟಮಿನ್ ಸಿ ಪ್ರಮಾಣ ಸಾಕಷ್ಟಿದೆ. ಹಲವು ಬಗೆಯ ಖನಿಜಾಂಶ ಗಳು ಕೂಡ ಅಧಿಕ ಪ್ರಮಾಣದಲ್ಲಿದೆ. ಸೀಬೆ ಮರದ ಎಲೆಗಳಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುವ ಸೂಕ್ಷ್ಮಾಣು ಗಳನ್ನು ನಿಯಂತ್ರಣ ಮಾಡುವ ಗುಣಲಕ್ಷಣಗಳಿವೆ ಎನ್ನುತ್ತಾರೆ ಹಿರಿಯರು.

ಹೀಗಾಗಿ ಸೀಬೆ ಎಲೆಯ ಕಷಾಯ ಆಗೊಮ್ಮೆ  ಹೀಗೊಮ್ಮೆ ಸೇವನೆಯಿಂದ ಹಲವು ಆರೋಗ್ಯ ಲಾಭಗಳಿವೆ, ಮೊದಲಿಗೆ ಸೀಬೆ ಮರದ ಸ್ವಲ್ಪ ಬಲಿತಿರುವ ಎಲೆಗಳನ್ನು ತೆಗೆದುಕೊಂಡು ತೊಳೆದು ಒಲೆಯ ಮೇಲೆ ಎರಡು ಕಪ್ ನೀರನ್ನು ಕುದಿ ಯಲು ಇಟ್ಟು ಎಲೆಗಳನ್ನು ಹಾಕಿ ಕುದಿಸಿ. ನೀರನ್ನು ಸೋಸಿಕೊಂಡು ಉಗುರು ಬೆಚ್ಚಗಿನ ತಾಪಮಾನ ಕ್ಕೆ ಬಂದ ಮೇಲೆ ಕುಡಿಯಿರಿ. ರುಚಿಗೆ ಬೇಕಿದ್ದರೆ ಒಂದು ಒಂದು ಟೀ ಚಮಚ ಜೇನುತುಪ್ಪ ಅಥವಾ ನಿಂಬೆ ರಸ ಹಿಂಡಿ ಸೇವಿಸಬಹುದು.

ಕರುಳಿನ ಆರೋಗ್ಯಕ್ಕೆ ಅನುಕೂಲಕರವಾಗಿ ಕೆಲಸ ಮಾಡುವ ಜೊತೆಗೆ ಅಜೀರ್ಣ-ಮಲಬದ್ಧತೆಯಂತಹ ಸಮಸ್ಯೆಯನ್ನು ಹೋಗಲಾಡಿಸಿ ಜೀರ್ಣ ಶಕ್ತಿಯನ್ನು ವೃದ್ಧಿಸುವಲ್ಲಿ ನೆರವಾಗುತ್ತದೆ. ಅತಿಸಾರ ಮತ್ತು ಹೊಟ್ಟೆ ಉಬ್ಬುವಿಕೆ ಮುಂತಾದ ಸಮಸ್ಯೆಯನ್ನು ದೂರ ಮಾಡುತ್ತದೆ. ಮೊಡವೆಗಳು, ಕಪ್ಪು ಕಲೆಗಳು ಮತ್ತು ವಯಸ್ಸಾದ ಚಿಹ್ನೆಗಳು ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳನ್ನು ಗುಣಪಡಿಸಲು ಸಹಕಾರಿ.

ಒಂದೆರಡು ಸೀಬೆ ಎಲೆಗಳನ್ನು ಜಗಿಯುವುದರಿಂದ ಹಲ್ಲುನೋವು ಮತ್ತು ವಸಡಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಸೀಬೆ ಮರದ ಎಲೆಗಳು ನಮ್ಮ ಹೃದಯದ ಆರೋಗ್ಯವನ್ನು ಹೆಚ್ಚಾಗಿಸುವ ಕೆಲಸ ಮಾಡುತ್ತದೆ. ಹೃದಯ ರಕ್ತನಾಳದ ಕಾರ್ಯ ಚಟುವಟಿಕೆ ಸರಿಯಾಗಿ ನಡೆಯುವ ಹಾಗೆ ಮಾಡುತ್ತದೆ. ಪ್ರಮುಖವಾಗಿ ರಕ್ತದಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಅಥವಾ ಎಲ್ಡಿಎಲ್ ಪ್ರಮಾಣವನ್ನು ತಗ್ಗಿಸಿ ಹೃದಯದ ಆರೋಗ್ಯ ವೃದ್ಧಿಸಲು ಅನುಕೂಲ ಮಾಡುತ್ತದೆ.

ಸೀಬೆ ಮರದ ಎಲೆಗಳು ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣ ಮಾಡುವಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಸ್ಟಾರ್ಚ್ ಮತ್ತು ಕಾರ್ಬೊಹೈಡ್ರೇಟ್ ಅಂಶವನ್ನು ಗ್ಲುಕೋಸ್ ಅಂಶವಾಗಿ ಬದಲಾಯಿಸುವ ಗುಣಲಕ್ಷಣಗಳು ಈ ಎಲೆಗಳಲ್ಲಿ ಕಂಡು ಬರುತ್ತದೆ. ಇದರಿಂದ ಮಧುಮೇಹ ನಿರ್ವಹಣೆ ಜೊತೆಗೆ ಬ್ಲಡ್ ಶುಗರ್ ಲೆವೆಲ್ ತಗ್ಗುವುದು. ಮುಟ್ಟಿನ ನೋವಿನ ಸಮಸ್ಯೆಗೂ ಕೂಡ ಸೀಬೆ ಎಲೆಗಳು ಪ್ರಯೋಜನಕಾರಿ.

ಮೂರು ನಾಲ್ಕು ಎಲೆಗಳನ್ನು ನೀರಿನಲ್ಲಿ ಕುದಿಸಿ ತಣ್ಣಗಾಗಲು ಬಿಡಬೇಕು, ಶಾಂಪೂ ಮಾಡಿದ ನಂತರ ಕೂದಲನ್ನು ಈ ನೀರಿನಿಂದ ತೊಳೆದರೆ ಕೂದಲಿನ ಬುಡ ಬಲಗೊಳ್ಳುವುದ ಜೊತೆಗೆ ಉದುರುವಿಕೆ ಕಡಿಮೆಯಾಗುತ್ತದೆ.

Related Posts

Leave a Reply

Your email address will not be published. Required fields are marked *