ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡು ಪಾವತಿಸಲು ಹಿಂದೇಟು ಹಾಕುತ್ತಿರುವ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಮತ್ತೊಮ್ಮೆ ಬೀಗ ಬಿದ್ದಿದೆ.
ಮಂತ್ರಿ ಮಾಲ್ 30.81 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮಾಲ್ ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಮಂತ್ರಿಮಾಲ್ ಗೆ ಬೀಗ ಹಾಕಿದ್ದರಿಂದ ಮಾಲ್ ನಲ್ಲಿ ಕೆಲಸ ಮಾಡುತ್ತಿರುವ ನೂರಾರು ಸಿಬ್ಬಂದಿಗೆ ಹೊರಗೆ ಕಾಯುವಂತಾಗಿದೆ. ಅಲ್ಲದೇ ಪ್ರತಿದಿನ ಭೇಟಿ ನೀಡುತ್ತಿದ್ದ ಸಾರ್ವಜನಿಕರಿಗೂ ತೊಂದರೆ ಉಂಟಾಗಿದೆ.
ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸಚಿವ ದಿನೇಶ್ ಗುಂಡೂರಾವ್, ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಂತ್ರಿ ಮಾಲ್ ಒಳಪಡುತ್ತದೆ. ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಸೀಜ್ ಮಾಡಿದ್ದಾರೆ. ಹಲವು ಬಾರಿ ನೋಟಿಸ್ ಕೊಟ್ಟಿದ್ದರೂ ನೋಟಿಸ್ ಕಡೆಗಣಿಸಿದ್ದಾರೆ. ಮಂತ್ರಿ ಮಾಲ್ ನವರು ನಷ್ಟದಲ್ಲಿ ಇದ್ದಾರೆ ಎಂದು ಅನಿಸುವುದಿಲ್ಲ. ಲಾಭದಲ್ಲಿದ್ದರೂ ತೆರಿಗೆ ಪಾವತಿಸಲು ಕಷ್ಟ ಏನು ಗೊತ್ತಿಲ್ಲ. ನಿಯಮದ ಪ್ರಕಾರ ತೆರಿಗೆ ಪಾವತಿ ಮಾಡಬೇಕಿತ್ತು ಎಂದಿದ್ದಾರೆ.


