ಭಿಕ್ಷೆ ಬೇಡಿದ ಹಣದಲ್ಲಿ ಉಳಿತಾಯ ಮಾಡಿದ ಮಂಗಳಮುಖಿ ಕಂಪ್ಲಿ ತಾಲೂಕಿನ ಎರಡು ಸರ್ಕಾರಿ ಶಾಲೆಯ 150 ಮಕ್ಕಳಿಗೆ ಬಟ್ಟೆ ಕೊಡಿಸಿದ್ದಾರೆ.
ಕಂಪ್ಲಿಯ ಮಂಗಳಮುಖಿ ರಾಜಮ್ಮ ಈ ಕೆಲಸ ಮಾಡಿದವರು. ಭಿಕ್ಷಾಟನೆ ಮಾಡಿ ಉಳಿತಾಯ ಮಾಡಿದ್ದ ಹಣದಲ್ಲಿ ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾರದಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ 60000 ರೂ. ಮೌಲ್ಯದ ಟೀ ಶರ್ಟ್, ಪ್ಯಾಂಟ್, ವಸ್ತ್ರಗಳನ್ನು ನೀಡಿದ್ದಾರೆ.
ಭಿಕ್ಷೆ ಬೇಡಿದ ಹಣದಲ್ಲಿ ಉಳಿತಾಯ ಮಾಡಿ ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂಬ ಇಚ್ಛೆಯಿಂದ ಬಟ್ಟೆ ಕೊಡಿಸಿದ್ದಾಗಿ ಮಂಗಳಮುಖಿ ರಾಜಮ್ಮ ಹೇಳಿದ್ದಾರೆ.