Saturday, February 28, 2026
Menu

ಎಫ್‌ಡಿ ಮೇಲೆ ಸಾಲ ಕೊಡಿಸೋದಾಗಿ ಗ್ರಾಹಕರಿಗೆ ಮೂರು ಕೋಟಿ ವಂಚಿಸಿದ ಮ್ಯಾನೇಜರ್‌

ಹಾಸನದ ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್ ಮ್ಯಾನೇಜರ್‌ ನಿಗದಿತ ಠೇವಣಿ ಮೇಲೆ ಸಾಲ‌ ಕೊಡಿಸುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಗ್ರಾಹಕರಿಂದ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಬ್ಯಾಂಕ್​ ಮ್ಯಾನೇಜರ್ ಹೆಚ್​​.ಎಸ್​.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾಗೆ ದೂರು ನೀಡಲಾಗಿದೆ. ಎಫ್​ಡಿ ಇಡುವಂತೆ ಹೇಳಿ ಕೋಟ್ಯಂತರ ಹಣ ಸಮೇತ ಮ್ಯಾನೇಜರ್​​ ನಾಪತ್ತೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬ್ಯಾಂಕ್​​ನಲ್ಲಿ ಎಫ್ಡಿ ಇಟ್ಟರೆ 25 ಲಕ್ಷದಿಂದ 1 ಕೋಟಿವರೆಗೂ ಸಾಲ ಕೊಡಿಸುವುದಾಗಿ ಗ್ರಾಹಕರಿಗೆ ಬ್ಯಾಂಕ್​ ಮ್ಯಾನೇಜರ್ ಪೂಜಾ ಆಮಿಷ ಒಡ್ಡಿದ್ದರು. 25 ಲಕ್ಷ ಲೋನ್​ಗೆ 10 ಲಕ್ಷ ಸಬ್ಸಿಡಿ ಎಂದು ನಂಬಿಸಿ ಜನರಿಂದ ಹಣ ಸಂಗ್ರಹಿಸಿದ್ದರು. ಇವರ ಮಾತು ನಂಬಿ ಬ್ಯಾಂಕ್​​ನಲ್ಲಿ ಜನ ಹಣ ಇಟ್ಟಿದ್ದು, ಎಫ್​ಡಿ ಮಾಡಿರುವ ಹಣಕ್ಕೆ ಯಾವುದೇ ದಾಖಲೆ ಮ್ಯಾನೇಜರ್​​ ನೀಡಿಲ್ಲ. ಗ್ರಾಹಕರು ಹಣ ವಾಪಸ್ ಕೇಳಿದ್ದಕ್ಕೆ ಕೆಲವರಿಗೆ ಚೆಕ್ ನೀಡಿ ಪೂಜಾ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಹಣ ಸಂಗ್ರಹದ ಬಳಿಕ ಆರೋಪಿ ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಪಾಸ್​​ಪೋರ್ಟ್​​ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಬಂಧಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಸೂರ್ಯೋದಯ ಸ್ಮಾಲ್ ಫೈನಾನ್ಸ್​​​ ಬ್ಯಾಂಕ್​​ ಗ್ರಾಹಕರು ಎಸ್ಪಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published. Required fields are marked *